ಮಳೆ ಶುರುವಿಟ್ಟುಕೊಂಡಿದೆ.....
ಈ ದಿನಗಳಿಗಾಗಿ
ಬಹಳ ಕಾದಿದ್ದೆ...
ಪುರುಗು ವಾಸನೆ ಬರುತ್ತಿದ್ದ
ಕಂಬಳಿಯ ಮೇ ತಿಂಗಳ
ಬಿಸಿಲಲ್ಲಿ ಒಣಗಿಸಿ,
ಪಾತ್ರೆ ತುಂಬುವಷ್ಟು
ಚಕ್ಕುಲಿ, ಕೋಡುಬಳೆ
ಮಾಡಿಟ್ಟ ಅಮ್ಮನನ್ನು
ಆಗಲೇ
ಕೊಡುವಂತೆ ಕಾಡಿಸಿ
ಕಾದಿದ್ದೆ
ಈಗ ಮಳೆ ಸುರಿದಿದೆ
ಮಳೆ ಸುರಿದಷ್ಟೂ
ಹಳೆಯ ನೆನಪುಗಳು
ಥಂಡಿಯಾಗುತ್ತಿವೆ
ಮೂಗು ಕಟ್ಟಿಕೊಳ್ಳುತ್ತದೆ,
ನೆನಪಿನ
ಕಪಾಟಿನೊಳಗಿನ
ಧೂಳಿಗೆ ಗಂಟಲು
ಬಿಗಿಯಾಗುತ್ತದೆ
ಅಚ್ಚರಿ ಮೂಡಿಸುತ್ತದೆ
ಈ ಮಳೆ
ಇಳೆಯ ಜತೆ ನರ್ತಿಸಿ
ಸೃಷ್ಟಿಗೆ ಮೊದಲಿಡುತ್ತದೆ...
ಮಳೆಯೆನ್ನುವ ಮಳೆ ಕರಾವಳಿಯಲ್ಲಿ ಕಾಲಿಟ್ಟಾಗಿದೆ, ಮಳೆಗಾಲದ ಆರಂಭದಲ್ಲಿ ಹೊರಗೆ ಕಾಲಿಡಲೂ ಬಿಡದೆ ಹನಿ ಕಡಿದುಕೊಳ್ಳದೆ ಸುರಿಯುವ ಆ ಮಳೆ ಮನಸ್ಸು ಮುದಗೊಳಿಸುತ್ತದೆ ಜತೆಗೆ ಹಿಂದಿನ ಎಲ್ಲ ನೆನಪುಗಳನ್ನೂ ತಾಜಾಗೊಳಿಸುತ್ತದೆ.
ಅಂತಹ ಮಳೆಯಲ್ಲಿ ಮನ ಉದಾಸೀನಗೊಳ್ಳುತ್ತಿದ್ದರೂ ಕ್ಯಾಮೆರಾದಲ್ಲಿ ಕೆಲವು ಚಿತ್ರ ಸೆರೆಹಿಡಿದಿದ್ದೇನೆ, ಈ ಸಾಲುಗಳೊಂದಿಗೆ ನೆಂಜಿಕೊಳ್ಳುವುದಕ್ಕೆ....
ಹೇಗಿದೆ ಹೇಳಿ...
10 comments:
ಮೊನ್ನೆಯಿಂದ ಶುರುವಾದ ಮುಂಗಾರುಮಳೆಗೆ lovely ಸ್ವಾಗತ ಬಯಸಿದ್ದೀರಿ.
ಮಳೆಯೊಂದಿಗೆ ಹಳೆಯ ನೆನಪುಗಳೂ ತಾಜಾ ಆಗುತ್ತವೆ ಎನ್ನುವದು ಖರೆ. ನಿಮ್ಮ ಚಿತ್ರಗಳೂ ತುಂಬ ಚೆನ್ನಾಗಿವೆ.
ಮಳೆ ಚಿತ್ರಗಳೊಂದಿಗೆ ತಕ್ಕ ಕವನ. ಎರಡೂ ಸೂಪರ್!
ಮಳೆಯ ಕವನ ಹಾಗೂ ಚಿತ್ರಗಳು ಸೊಗಸಾಗಿವೆ.ನನ್ನ ಬ್ಲಾಗಿಗೂ ಒಮ್ಮೆ ಬನ್ನಿ.
ಚೆನ್ನಾಗಿದೆ! ಒಮ್ಮೆ ಆ ಹನಿಗಳಿಗೆ ಮುಖವೊಡ್ಡಿ ನೆನೆಯುವ ಆಸೆ ಮೂಡಿದೆ
wow.. maLeyannu swaagatisuva sundara reeti..
ಮಳೆಯ ಸ್ವಾಗತ ಒಳ್ಳೇ ಕವನದೊ೦ದಿಗೆ ಮಾಡಿದ್ದಿರಾ..
pratikriyisi protsaahisuttiruva ella mitrarige vandanegalu
ಮಳೆ-ಚಿತ್ರ ಎರ್ದೂ ತುಂಬಾ ಚೆನ್ನಾಗಿವೆ.. ಖುಷಿ ಆಯ್ತು
nanage photos ishta aythu
Post a Comment