27.9.10

ಸವೆದ ಬೇರಿನ ಮರಗಳು

ನೀ
ನಡೆದು ಹೋದ ಮೇಲೆ
ಹೆಜ್ಜೆಗಳಲ್ಲಿ
ಗೆಜ್ಜೆ ಸದ್ದುಗಳಲ್ಲಿ
ಉಳಿದ್ದಾದರೂ ಏನು
ನಿನ್ನ ನೆನಪುಗಳು
ಅಲೆ ಅಲೆಯಾಗಿ
ನನ್ನ ಕೊಚ್ಚಿಕೊಂಡು ಹೋದ ಮೇಲೆ
ಉಳಿದ ಬೇರುಗಳನ್ನು
ಕಟ್ಟಿಕೊಂಡು ಮಾಡುವುದೇನು
ಬಾಲ್ಕನಿಯಲ್ಲಿ ನಿಂತು
ನೆನಪುಗಳಲೇ ಕಳೆದುಕೊಂಡು
ಆರಿದ ಕಾಫಿಯ
ಕಂಡು ಕನಲಿದರೆ
ಸಿಗುವುದಾದರೂ ಏನು!

*************


ಒಲವೆಂಬ ಮಳೆ ಹಾಗೇ ಹರಿದು
ಯಾರ ಒಡಲೂ ಸೇರದೆ
ಕಡಲ ಸೇರಿತು..
ತೆಂಗಿನ ಮರದ
ಗರಿಗಳಿಂದ ನೀರು ತೊಟ್ಟಿಕ್ಕಿತು


***********
ಗಾಳಿಪಟಗಳು
ಎಲ್ಲೆಡೆ ಹಾರುತ್ತಿವೆ
ಸೂತ್ರವಿದ್ದವು ಕುಣಿದರೆ
ಸೂತ್ರ ಹರಿದವು
ಸರ್ವಸ್ವತಂತ್ರವಾಗಿ

ಓಲಾಡಿದವು

6 comments:

sunaath said...

ವೇಣು,
ನವಿರಾದ ಭಾವನೆಯ ಈ ಮೂರು ಪದ್ಯಗಳಿಗೆ ಭಾವ-ಹನಿ ಎನ್ನಬೇಕೆ ಅಥವಾ ಹಾಯಿಕುಗಳು ಎನ್ನಬೇಕೆ ಎನ್ನುವದು ನನಗೆ ತಿಳಿಯದು. ಏನೇ ಆಗಿರಲಿ, ಇವು ಸೊಗಸಾಗಿವೆ ಎಂದಷ್ಟೇ ನಾನು ಹೇಳುತ್ತೇನೆ.

ದಿನಕರ ಮೊಗೇರ said...

veNu sir,
uLidaddaadaru enu...?
sakattaagide.....

ಭಾಶೇ said...

ತುಂಬಾ ಚೆನ್ನಾಗಿದೆ!

ಅಪ್ಪ-ಅಮ್ಮ(Appa-Amma) said...

ವೇಣು ಅವರೇ,

ಇಷ್ಟವಾಯ್ತು ನಿಮ್ಮ ಸಾಲುಗಳು ..

shivu.k said...

ವೇಣು ವಿನೋದ್,

ನವಿರು ಭಾವನೆಗಳನ್ನು ಹೊಮ್ಮಿಸುವಂತ ಮೂರು ಪದ್ಯಗಳು ತುಂಬಾ ಚೆನ್ನಾಗಿವೆ...

Soumya. Bhagwat said...

just amazing lines....... !

Related Posts Plugin for WordPress, Blogger...