19.9.10

ಹೆದ್ದಾರಿ ಕಥೆಗಳು-೨

 ಅದೊಂದು ಛಳಿಗಾಲದ ಇಳಿಹೊತ್ತು..
ಹಗಲಿಡೀ ವಾಹನಗಳ ಭರಾಟೆಯಿಂದ ಹೈರಾಣಾಗಿ ಹೆದ್ದಾರಿ ವಿಶ್ರಾಂತಿಗೆ ಇಳಿದಂತಿತ್ತು. ಅರಣ್ಯದ ನಡುವೆ ಹಾದು ಹೋಗುವ ಘಾಟಿ  ದಾರಿಯದು, ರಾತ್ರಿಯಾದರೆ ವಾಹನಗಳ ಸಂಖ್ಯೆ ಕಡಿಮೆ. ಆಗಲೇ ಸೋಡಿಯಂ ವೇಪರ‍್ ಲೈಟುಗಳಿ ಮಿನುಗಲು ತೊಡಗಿದ್ದವು.
ಗಂಟೆಗಳುರುಳಿದವು. ಜೀಪೊಂದು ಕೇಕೆ ಹಾಕುತ್ತಾ ತೂರಾಡುತ್ತಾ ಬಂತು.
ಒಳಗಿರುವವರ ಪರಿಸ್ಥಿತಿ ಹೀಗಎಯೇ ಇರಬಹುದೆಂದು ಊಹಿಸಿ ಹೆದ್ದಾರಿಗೆ ನಗೆಯುಕ್ಕಿತು. ಯಾರೋ ನಕ್ಕಂತಾಗಿ ಡ್ರೈವಿಂಗ್‌ ಸೀಟಿನಲ್ಲಿದ್ದವನಿಗೆ ಸಿಟ್ಟು ಬಂತು. ಹಿಂದಿನ ಸೀಟಲ್ಲಿದ್ದವರಿಗೆ  ತೊಡರು ನಾಲಗೆಯಲ್ಲೇ ಬೈದ..ಸು..ಮ್ನೆ ಕುಂತ್ಕ..ಳ್ಳಿ..ಇಂಥವರನ್ನ ದಿನಾ ನೋಡುತ್ತಿದ್ದ ಹೆದ್ದಾರಿಗೆ ಮತ್ತೂ ನಗುಬಂತು, ಡ್ರೈವರನ್ನು ಇನ್ನಷ್ಟು  ಪೇಚಿಗೆ ಸಿಲುಕಿಸಲು ಮತ್ತೊಮ್ಮೆ ಗಟ್ಟಿಯಾಗಿ ನಕ್ಕಿತು. ಈ ಬಾರಿ ಅಮಲಿನಲ್ಲೂ ಎಲ್ಲರಿಗೂ ನಗು ಕೇಳಿತು. ನಗು ಮತ್ತೆ ಮತ್ತೆ ಬಿಚ್ಚಿಕೊಳ್ಳುತ್ತಾ ಹೋದಾಗ ಆ ನಗು ತಮ್ಮದ್ದಲ್ಲ ಎಂದು ಸ್ಪಷ್ಟವಾಯಿತು. ಡ್ರೈವರನಿಗೆ ಚಿಕ್ಕವನಿದ್ದಾಗ ಕೇಳಿದ ಭೂತ ಪಿಶಾಚಿ ಕಥೆಗಳು ನೆನಪಾದವು, ಕೈ ಮರಗಟ್ಟಿತು. ಒಂದೊಂದು ಮರಗಳೂ ಒಂದೊಂದು ಆಕಾರ ಪಡೆದು ನರ್ತಿಸತೊಡಗಿದವು. ರಸ್ತೆಯೇ ದಢೀರ್‌ ಎದ್ದು ನಿಂತಂತಾಯಿತು. ಆ ಕೊರಕಲಿನ ತಿರುವಿನಲ್ಲಿ ಸ್ಟೀರಿಂಗ್‌ ತಿರುಗಲೇ ಇಲ್ಲ.....
ಆ ತಿರುವಿನಲ್ಲೊಂದು ಫಲಕವಿತ್ತು.
ಎಚ್ಚರಿಕೆ ! ಅಪಘಾತ ವಲಯ!

7 comments:

ದಿನಕರ ಮೊಗೇರ.. said...

veNu sir,
tumbaa chennaagide kiru kathe....
mangaLuralli heddaari aLuttide... naguttilla tanna stiti kandu.. hha hha

sunaath said...

ಸ್ವಾರಸ್ಯಪೂರ್ಣ ಕತೆ!

shivu.k said...

ಚಿಕ್ಕದಾದರೂ ಚೊಕ್ಕಕತೆ..ಚೆನ್ನಾಗಿದೆ.

ಭಾಶೇ said...

Chennagide

Subrahmanya said...

ಕಲ್ಪಸಿಕೊಳ್ಳುತ್ತಾ ಹೋದರೆ ಹಲವು ಆಯಾಮಗಳು ತೆರೆದುಕೊಳ್ಳುತ್ತದೆ. ಕತೆ ಚೆನ್ನಾಗಿತ್ತು.

VENU VINOD said...

ದಿನಕರರೇ ಪ್ರತಿ ಬರಹಕ್ಕೂ ಪ್ರತಿಕ್ರಿಯಿಸುವ ನಿಮ್ಮ ತಾಳ್ನೆ ಮತ್ತು ಓದುವ ಖುಷಿಗೆ ಹ್ಯಾಟ್ಸ್‌ ಆಫ್.
ಸುನಾಥರಿಗೆ ವಂದನೆ
ಶಿವು ಥ್ಯಾಂಕ್ಸ್
ಭಾಶೇ ಥ್ಯಾಂಕ್ಸ್
ಸುಬ್ರಹ್ಮಣ್ಯರೇ..ನನ್ನ ಪ್ರಯತ್ನ ಪ್ರೋತ್ಸಾಹಿಸಿದ್ದಕ್ಕೆ ನಲ್ಮೆ

pramodc said...

ನಿಮ್ಮ ಕಥೆ ಚೆನ್ನಾಗಿದೆ.

ನಾನು ಒ೦ದು ಸಾರಿ ಊರಿಗೆ ಹೋಗ್ತಾ ಇದ್ದೆ. ಡ್ರೈವರ್ ಹಿ೦ದಿನ ಸೀಟು. ಮು೦ಜಾವಾಗಿತ್ತು. ಸಕಲೇಶಪುರ ದಾಟಿತ್ತು. ಡ್ರೈವರ್ ಕ೦ಡಕ್ಟರ್ ಮಾತನಾಡುತ್ತಿದ್ದರು. ಡ್ರೈವರ್ ಹೇಳುತ್ತಿದ್ದ "ಎ೦ತದು ಮಾರಯ, ನಾವು ಮನುಷ್ಯರಲ್ವಾ.. ನಮಗೂ ಒ೦ದೊ೦ದು ಸಾರಿ ನಿದ್ದೆ ಬ೦ದ ಹಾಗೆ ಆಗ್ತದೆ.. ಎ೦ತ ಮಾಡುವುದು?".

Related Posts Plugin for WordPress, Blogger...