ಸತ್ಯ ಶೋಧಿಸಲು
ಗಣಿ ಅಗೆಯುತ್ತಾ
ಆಳಕ್ಕಿಳಿದಂತೆ
ಸತ್ಯವನ್ನೇ
ಗಣಿ ನುಂಗಿಬಿಟ್ಟಿತು
ಸತ್ಯಕ್ಕೆ ಹೊರಬರಲಾಗದೆ
ಥರಗುಟ್ಟಿತು, ಚಡಪಡಿಸಿತು
ಗಣಿಯ ಶಕ್ತಿಗೆ, ಸತ್ಯದ
ಬಡಪೆಟ್ಟುಗಳು
ತಾಕಲಿಲ್ಲ
ಸತ್ಯವನ್ನೇ ಮಿಥ್ಯವಾಗಿ
ತೋರಿಸುವಷ್ಟಿತ್ತು
ಗಣಿಯ ದೌಲತ್ತು
ಸತ್ಯ ತಾಳ್ಮೆಗೆಡಲಿಲ್ಲ
ಗಣಿಯ ಧೂಳಿನಡಿಯಲ್ಲೇ
ನ್ಯಾಯದ ಮುತ್ತುಗಳ
ಪೋಣಿಸುತ್ತಲೇ
ಹೋಯಿತು..
ಕಡೆಗೊಮ್ಮೆ ಸತ್ಯ
ಪ್ರಜ್ವಲಿಸಿತು
ಗಣಿಯ ಧೂಳು
ಮರೆಯಾಯಿತು!
7 comments:
ಪದ್ಯ ಚೆನ್ನಾಗಿದೆ. ಅಭಿನಂದನೆಗಳು.
ಪದ್ಯ ಚೆನ್ನಾಗಿದೆ. ಅಭಿನಂದನೆಗಳು.
prastuta vidyamanakke takkudada chandada padya katti kottiddiri...cngrts...
ನಿಜ, ಗಣಿ ಯಾ ಸತ್ಯ ಹೊರಗೆ ಬಂತು
ಧಣಿಯ ಸತ್ಯನೂ ಹೊರಗೆ ಬಂತು
ಸುಂದರ, ವ್ಯಂಗ್ಯ ತುಂಬಿದ ಕವನ.
kavana chennagide..good one
gud..
Post a Comment