ತನ್ನ ಗರ್ಭದಲ್ಲಿ
ಹೆಪ್ಪುಗಟ್ಟುವ ಮೇಘ
ಇಳೆಗೆ ಮಳೆಯಾಗಿ
ಸುರಿಯುವುದನ್ನು
ಆನಂದಿಸುವ ಆಗಸ
ಮೋಡಕ್ಕೆ ಬಾಡಿಗೆ ಕೇಳುವುದಿಲ್ಲ!
ಸುಂದರ ಪುಷ್ಪಗಳನ್ನು
ಹೆತ್ತು, ಅವು ಹೂಬುಟ್ಟಿ,
ಮಾರುಕಟ್ಟೆ ಸೇರಿ
ಸುಂದರಿಯ ಮುಡಿ ಸೇರಿದ್ದ
ತಿಳಿಯಲಾಗದ ಗಿಡ
ಕಣ್ಣೀರು ಸುರಿಸುವುದಿಲ್ಲ
ಕಂದನಿಗೆ ಇಷ್ಟಿಷ್ಟೇ ಉಳಿಸಿ
ತನ್ನ ಕೆಚ್ಚಲಿಂದ ಹಾಲೆಲ್ಲ
ಕೊಟ್ಟು ಬಿಡುವ ಗೋವು
ಮುಷ್ಕರ ಹೂಡುವುದಿಲ್ಲ...
ರೈತ ಬೆಳೆದ ಅಕ್ಕಿಯಲ್ಲಿ,
ಕಾರ್ಖಾನೆಯಿಂದ
ಹೊರಬರುವ ಉತ್ಪನ್ನಗಳಲ್ಲಿ
ಭೂಮಿ ಪಾಲು ಕೇಳುವುದಿಲ್ಲ...
(ತಡೀರಿ....
ಗೇಟಲ್ಲಿ ಕಿರಿಚುವ ಭಿಕ್ಷುಕನನ್ನ
ಓಡಿಸಿ ಬರುತ್ತೇನೆ )!!!
9 comments:
chennaagide!
ವೇಣು ಸರ್;ಕವನ ಚೆನ್ನಾಗಿದೆ.ಯಾರದೋ ಬೆವರಿನ ದುಡಿಮೆ,ಯಾರದೋ ಕರುಣೆಯ ಒಲುಮೆ ನಮ್ಮನ್ನು ಕ್ಷಣ ಕ್ಷಣವೂ ಸಲಹುತ್ತಿದೆ!ನಮಗೆ ಆ ಒಂದು ಅರಿವು ಸ್ವಲ್ಪವಾದರೂ ಇದ್ದರೆ ಸಾಕು.ಅದೆಲ್ಲದರ ಬಗ್ಗೆ ಒಂದು ಕ್ಷಣದ ಕೃತಜ್ಞತೆ ಸಾಕು.
ಅಲ್ಲವೇ?ನಮ್ಮ ಕ್ಷಣ ಕ್ಷಣದ ಉಸಿರಾಟಕ್ಕೆ ಬಾಡಿಗೆಯಾಗಿ ನಾವು ಏನು ತಾನೇ ಕೊಡಲು ಸಾಧ್ಯ?ಒಳ್ಳೆಯ ಕವನಕ್ಕೆ ಅಭಿನಂದನೆಗಳು.ಸಮಯವಿದ್ದಾಗ ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.
manassu tattitu
ತುಂಬಾ ಚೆನ್ನಾಗಿ ಬರೆದಿದ್ದೀರಿ...
ಹೇ ವೇಣು,
ನಿಮ್ಮ ಕವನವನ್ನು ಓದಿ ಖುಶಿಪಟ್ಟೆ. ಆದರೆ ನೀವು ಅದಕ್ಕಾಗಿ ಶುಲ್ಕ ಕೇಳುತ್ತಿಲ್ಲ!
ಬಹಳ ಚೆನ್ನಾಗಿ ಕಟು ವಾಸ್ತವವನ್ನು ತೆರೆದಿಟ್ಟಿದ್ದಿರಿ ...ಮನ ತಟ್ಟಿತು..ಕವನಿಸಿದ ಪರಿ ಚೆನ್ನಾಗಿದೆ..
ಮನುಷ್ಯ್ರನಷ್ಟು ಸ್ವಾರ್ಥ ಜೀವಿ ಭೂಮಿಯಲ್ಲಿ ಬೇರೆ ಇಲ್ಲ
ಚೆನಾಗಿದೆ ವೇಣು,
ಇಡೀ ಕವನದ ಅಂತರಾಳಕ್ಕೆ ಬರೆದ underline ಹಾಗಿದೆ ಕೊನೆಯ ಸಾಲು.
ಕವಿತೆ ತುಂಬ ಹಿಡಿಸಿತು.
ಪ್ರೀತಿಯಿಂದ,
ಸಿಂಧು
ಕೇಶವ ಕುಲಕರ್ಣಿಯವರಿಗೆ ವಂದನೆ...
ಡಾ.ಕೃಷ್ಣಮೂರ್ತಿಯವರೆ, ನನ್ನ ಬ್ಲಾಗ್‌ಗೆ ಸ್ವಾಗತ..ನೀವಂದಿದ್ದು ಸತ್ಯ ನಾವೇ ಅಲ್ಲವೆ ಸ್ವಾರ್ಥಿಗಳು? ನಿಮ್ಮ ಬ್ಲಾಗ್ ಖಂಡಿತ ನೋಡುವೆ..
ಮಿಥುನ, ಹಾಗಾದರೆ ಸಾಕು..
ಶಿವುಗೆ ಧನ್ಯವಾದ
ಸುನಾಥರೆ, ನಿಮ್ಮ ಕಮೆಂಟಿಗೆ ನೀವು ಶುಲ್ಕ ಕೇಳಿಲ್ಲ..!ವಂದನೆ :)
ಮೌನರಾಗ,ವಂದನೆಗಳು, ದೀಪಸ್ಮಿತ..ಅದು ಕಟುಸತ್ಯ
ಸಿಂಧು..ನಿಮ್ಮ ಪ್ರೋತ್ಸಾಹಕ್ಕೆ ನಮೋ...
Post a Comment