4.12.11

ಕಡಿದುಕೊಳ್ಳುವ ಕಷ್ಟ

ಕಡಿದುಕೊಳ್ಳುವುದು
ಅಥವಾ ಬಿಡಿಸಿಕೊಳ್ಳುವುದು
ಎಂದರೆ ಸುಲಭವಲ್ಲ
ನೂಲುಗಳ ಗಂಟಿನಂತೆ
ಸಿಕ್ಕುಸಿಕ್ಕಾದ ಅಥವಾ
ಹಾಲುಜೇನಿನಂತೆ ಮಧುರವಾದ
ಸಂಬಂಧವಿರಬಹುದು
ಎರಡನ್ನೂ ಕಡಿದು
ಹೊರಬರುವುದು ಕಡುಕಷ್ಟ
ಮೊದಲನೆಯದ್ದರಲ್ಲಿ
ಇರುವ ಒಗಟು ಬಿಡಿಸುವುದೇ
ದೊಡ್ಡ ಸವಾಲು
ಎರಡನೆಯದ್ದಂತೂ
ಹೇಳಿ ಸುಖವಿಲ್ಲ
ಅಲ್ಲೆಲ್ಲೋ ಅದೃಶ್ಯದ
ಎಳೆಗಳು
ಕಟ್ಟಿಹಾಕಿರುತ್ತವೆ
ಬೇಡವೆಂದರೂ ಕಡಿಯಲು
ಮನಸ್ಸು ಬರುವುದಿಲ್ಲ
ತಂಪೆರುವ ಮರದ
ಅಡಿಯಿಂದ ಒಮ್ಮೆಗೇ
ಬೇಸಗೆಯ ಮಧ್ಯಾಹ್ನಕ್ಕೆ
ಕಾಲಿಡುವುದು ಹೇಗೆ ?
ಒಂದು ವೇಳೆ
ಈ ಗುರುತ್ವ ಮೀರಿದರೆ
ತಾರಾ ಮಂಡಲದಾಚೆ ಹೋಗಬಹುದು
ಪಾರಾಗಲೂ ಬಹುದು,
ಅಥವಾ ಹೊಸ
ಬಲೆಯಲ್ಲಿ ಸಿಕ್ಕು ಹಾಕಿಕೊಳ್ಳಬಹುದು!

3 comments:

s.vitla said...

chennagide... I liked it

s.vitla said...

chennagide.. I liked it...

ಸಿಂಧು sindhu said...

ಪ್ರಿಯ ವೇಣು,

ಇಂಟರೆಸ್ಟಿಂಗ್.
ಸಂಬಂಧಗಳ ರೇಷ್ಮೆ ಎಳೆಗಳ ಹಿಡಿತವನ್ನ ಚೆನ್ನಾಗಿ ಗ್ರಹಿಸಿದ್ದೀರಿ.
ತಂಪೆರೆಯುವ ಮರದ
ಅಡಿಯಿಂದ ಒಮ್ಮೆಗೇ ಬೇಸಗೆಯ ಮಧ್ಯಾಹ್ನಕ್ಕೆ ಕಾಲಿಡುವುದು ಹೇಗೆ? ಸೂಪರ್ರ್.

ಸಿಂಧು

Related Posts Plugin for WordPress, Blogger...