22.11.11

ಹೆಸರ ಹಂಗಿಲ್ಲದ ಹನಿಗಳು

ಮನತುಂಬಾ ನೋವಿದ್ದರೂ
ನಿನ್ನ ಮುಖ ನೋಡಿದ ಬಳಿಕ
ಕಣ್ಣೀರಿಗೆ
ಹೊರಬರುವುದಕ್ಕೂ ಆಗದೆ
ಚಡಪಡಿಸುತ್ತಿದೆ
ನಕ್ಕು ಬಿಡು ಒಮ್ಮೆ
-----------------
ಅಂದು ನನ್ನ ಕಂಗಳಲ್ಲಿ
ನಿನ್ನ ಕಂಗಳ ಬೆಳಕು
ಪ್ರತಿಫಲಿಸಿತ್ತು,
ಆ ಬೆಳಕು
ಇಂದಿಗೂ ಕತ್ತಲಲ್ಲಿ
ನನ್ನ ಮುನ್ನಡೆಸುತ್ತಿದೆ!
------------------
ಸಂಜೆ ಗಾಢವಾದಾಗ
ಮಿಂಚಿದ ಮೊದಲ ನಕ್ಷತ್ರ
ಮತ್ತೆ ಮೂಡಿದ ಚಂದಿರ
ನಿನ್ನ ನೆನಪಿಸಿದಾಗ
ಮುಂದಿದ್ದ ಬಾಟಲಿ
ನನ್ನ ಅಣಕಿಸಿತು!

3 comments:

rashmi said...

aa batliyalli enittu
dear?

ರಾಘವೇಂದ್ರ ಹೆಗಡೆ said...

ಇಷ್ಟ ಆಯ್ತು ಸರ್ ನಿಮ್ಮ ಈ ನವಿರು ಸಾಲುಗಳು..

VENU VINOD said...

ಧನ್ಯವಾದಗಳು...ರಶ್ಮಿ, ರಾಘವೇಂದ್ರ....

Related Posts Plugin for WordPress, Blogger...