ನಾನು ಕಳೆದ ಕೆಲವರ್ಷಗಳಿಂದ ಕಂಡ ಕನಸನ್ನು ‘ಹೊಸದಿಗಂತ’ದ ಮಿತ್ರ ನಾರಾಯಣ ಬಾಳಿಲ ಮಾಡಹೊರಟಿದ್ದಾರೆ.
ಸುಳ್ಯದ ಬಾಳಿಲದ ತನ್ನನ್ನು ಪೊರೆದ ಮನೆಯತ್ತ, ತಾನು ಆಡಿಬೆಳೆದ ಮನೆಯತ್ತ ಮತ್ತೆ ಮುಖ ಮಾಡಿದ್ದಾರೆ.
ಸಾಕಷ್ಟು ಹಣ ಉಳಿಸುವ ಬ್ಯಾಂಕ್ ಅಧಿಕಾರಿಗಳು, ಸಾಫ್ಟ್ವೇರ್ ಇಂಜಿನಿಯರ್ಗಳು, ಸರ್ಕಾರಿ ಅಧಿಕಾರಿಗಳು ಹಳ್ಳಿಯಲ್ಲಿ ಫಾರ್ಮ್ಹೌಸ್ ಮಾಡುವಂತೆ ಇದು ಅಲ್ಲ. ಪತ್ರಕರ್ತ ಛಾಯಾಗ್ರಾಹಕರಾಗಿದ್ದುಕೊಂಡು ಆ ಕ್ಷೇತ್ರದ ಮೋಹ ಕಳಚಿ, ಮಂಗಳೂರೆಂಬ ಮಾಯೆಯ ಗುರುತ್ವ ಬಲ ಮೀರಿ ತಮ್ಮ ಊರಿನತ್ತ ಮೊಗಮಾಡಿದ್ದಾರಲ್ಲ ಅದು ಗ್ರೇಟ್!
ಕೃಷಿ ನನಗೆ ಹೊಸತಲ್ಲ, ಅನೇಕ ವರ್ಷಗಳಿಂದ ಇದೇ ಆಲೋಚನೆ ಮನದಲ್ಲಿತ್ತು, ತಮ್ಮ ಹೇಗೂ ಪತ್ರಿಕೋದ್ಯಮದಲ್ಲಿದ್ದಾನೆ. ಮನೆಯಲ್ಲಿ ತಂದೆ ತಾಯಿ ಮಾತ್ರ, ಅವರಿಗೂ ಪ್ರಾಯ ಆಯ್ತು, ಇನ್ನಾದರೂ ನಾನು ಮನೆಯಲ್ಲಿದ್ದರೆ ಅವರಿಗೂ ನೆಮ್ಮದಿ.
ಆದರೆ ಹಾಗೆಂದು ಅಷ್ಟೇ ಅಲ್ಲ, ಕೃಷಿಯಲ್ಲಿ ಹೊಸ ಪ್ರಯೋಗ ಕೈಗೊಳ್ಳುತ್ತೇನೆ, ಮಿಶ್ರ ಬೆಳೆ ಹಾಕುತ್ತೇನೆ, ಅಡಿಕೆ ಒಂದನ್ನೇ ನಂಬುವುದಲ್ಲ, ಹೀಗೆ ಒಂದಷ್ಟು ತಮ್ಮ ಗುಂಗನ್ನು ಮೊನ್ನೆ ಬಾಳಿಲ ನನ್ನೊಂದಿಗೆ ಹೇಳಿಕೊಂಡರು. ಇದೇ ಏ.೩೦ಕ್ಕೆ ಅವರು ಪೂರ್ಣವಧಿ ಪತ್ರಕರ್ತ ಎಂಬ ಭಾರವನ್ನು ಕಳಚಿಕೊಳ್ಳುತ್ತಿದ್ದಾರೆ.
ಬರವಣಿಗೆ ಮತ್ತು ಕ್ಯಾಮೆರಾ ಕೈಬಿಡುವುದಿಲ್ಲ, ಕೃಷಿ ಚಟುವಟಿಕೆಯ ಮಧ್ಯೆ ಸಿಕ್ಕುವ ಬಿಡುವನ್ನು ಅದಕ್ಕೆ ಬಳಸಿಕೊಳ್ಳುವೆ, ವೈಲ್ಡ್ಲೈಫ್ ಫೋಟೋಗ್ರಫಿ ಮಾಡಬೇಕು ಎಂಬ ಕನಸೂ ಅವರದ್ದು. ಮನೆಯಲ್ಲಿರುವ ಅಮೂಲ್ಯ ಭೂಮಿಯನ್ನು ವೃದ್ಧರನ್ನೂ ಬರಡಾಗಲು ಬಿಟ್ಟು ನಗರಗಳಲ್ಲಿ ಕನಸು ಬೆಂಬತ್ತುವ ನಮ್ಮ ಅನೇಕ ಯುವಜನರಿಗೆ ಬಾಳಿಲ ಹೊಸ ದಾರಿ ತೋರಿದ್ದಾರೆ.
ನಗರಗಳಲ್ಲಿ ಹೋದರೂ ಒಂದಷ್ಟು ಕಾಲ ಬಯಸಿದ ಕೆಲಸ ಮಾಡಿ, ನಮ್ಮ ಭೂಮಿಯತ್ತ ಮುಖಮಾಡಿದರೆ ನಮ್ಮ ಅನ್ನ ನೀಡುವ ಭೂಮಿ ಬರಡಾಗದು, ಹಳ್ಳಿಗಳು ಬರಡಾಗವು ಮತ್ತು ನಗರದ ಹೊರೆಯೂ ಕಡಿಮೆಯಾದೀತು. ಏನಂತೀರಿ?
ಅದಕ್ಕಾಗಿಯೇ ಬಾಳಿಲರಿಗೊಂದು ಸಲಾಂ!
ನಗುಮೊಗದ ಮೆಲುನಡೆಯ ಬಾಳಿಲ(9845366791) ಕೃಷಿಯಲ್ಲೂ ಸಾಧಕರಾಗಲಿ ಎಂಬ ಹಾರೈಕೆ ನಮ್ಮದು.
5 comments:
really great
good luck balila
shubhashayagalu
awesome!! all the best to Balila!!
balila balu belagali..
ಬಹುಷ ಬಾಳಿಲನಂತಹಸರಳ-ಸಜ್ಜನ,ಸ್ನೇಹ ಜೀವಿ ಪತ್ರಿಕೋದ್ಯಮದಲ್ಲಿ ಸಿಗುವುದು ಬಹಳ ಅಪರೂಪ..ಇಂದಿನ ನವಯುಗದ ಪತ್ರಕರ್ತರಿಗೆ-ಫೊಟೊಗ್ರಾಫರಿಗೆ ಅವನು ಮೇಲ್ಫಂಕ್ತಿ ಯಾಗಿದ್ದಾನೆ.ಅವನ ಈ ನಿರ್ಧಾರಕ್ಕೆ ನಿಜವಾಗಿಯೂ ಹ್ಯಾಟ್ಸ ಆಫ್...ಅವನ ಮುಂದಿನ ಹಳ್ಳಿ ಜೀವನಸುಖಮಯವಾಗಲಿ ಎಂಬುವುದು ನಮ್ಮೆಲ್ಲರ ಆಶಯ.All the Best baliia.
Post a Comment