24.4.13

ನಿಶ್ಯಕ್ತ ಸಾಲುಗಳು

ಪುರುಷಾರ್ಥವಿಲ್ಲದೆ 
ವ್ಯರ್ಥ ಪ್ರಲಾಪಿಸುವ
ಈ ನನ್ನ ಕವನಗಳು
ಭರವಸೆಯಿಲ್ಲದ
ಜನನಾಯಕರ
ಭಾಷಣಗಳಂತೆ
ಆ ಕಿವಿಯಲ್ಲಿ ಕೇಳಿ
ಈ ಕಿವಿಯಲ್ಲಿ ಹಾರಿ ಹೋಗುತ್ತವೆ!

ಒಣಕಲು ಮರದಿಂದ
ಜಾರಿ ಬಿದ್ದು ಮಧ್ಯಾಹ್ನದ
ಗಾಳಿಗೆ ವಿಲವಿಲನೆ
ತೆವಳುವ ಹಣ್ಣೆಲೆಯಂತೆ
ನಿಶ್ಯಕ್ತ ಪದಗಳು
ಸವಕಲಾಗಿವೆ.

ರಂಜಿಸಲು 
ಯತ್ನಿಸಿ ಪೇಚಾಡುತ್ತವೆ
ಒಂದೊಂದೂ ಸಾಲು
ಓದುಗ ರಸಿಕರ
ಮನದಂಗಳದಲ್ಲಿ 
ಪಡಿಯಚ್ಚು ಮೂಡಿಸಲು
ಸೋಲುತ್ತಿವೆ.

ನಾನೋ ಧನುರ್ದಾರಿಯಾಗಿ
ನಿಂತು,
ಅತ್ತ ಶಸ್ತ್ರಸನ್ಯಾಸ ಮಾಡಲಾರದೆ
ಇತ್ತ ಯುದ್ಧ ಮುಂದುವರಿಸಲಾಗದೆ
ಗೀತೋಪದೇಶಕ್ಕೆ ಕಾಯುತ್ತಿದ್ದೇನೆ!

2 comments:

Badarinath Palavalli said...

ಶೀರ್ಷಿಕೆಗೆ 50 ಅಂಕಗಳು ಮತ್ತು

" ಓದುಗ ರಸಿಕರ
ಮನದಂಗಳದಲ್ಲಿ
ಪಡಿಯಚ್ಚು ಮೂಡಿಸಲು
ಸೋಲುತ್ತಿವೆ." ಸಾಲುಗಳಿವೆ ಉಳಿದ 50 ಅಂಕಗಳು.

ಸೂಪರ್.

http://badari-poems.blogspot.in

ಕಲರವ said...

soluttive ande gelluttiveyalla chandada saalugalu.banni namma blogigu.

Related Posts Plugin for WordPress, Blogger...