ಚೆಂಗುಲಾಬಿಯ
ಮುಂಜಾನೆಯ ಕನಸುಗಳು
ಮಂಜಿನಲ್ಲಿ ತೊಯ್ದು
ತೊಪ್ಪೆಯಾದವು
ಹುಲ್ಲಿನ ತುದಿಯ ಹನಿ
ಸೂರ್ಯನ ಬೆಳಕಲ್ಲಿ
ಮಿನುಗಿ ಬೆರಗಾಯಿತು!
******
ಒಂದು ಧನ್ಯತೆಯ
ಮುಂಜಾನೆಯೆಂದರೆ
ಅಂದಿನ ರಾತ್ರಿಯ ವರೆಗೆ
ಇರುವ ಕರಾರುವಾಕ್
ಯೋಜನೆಯ ಯೋಚನೆ
*******
ಒಂದು ಮುಂಜಾನೆ
ಬಸ್ ನಿಲ್ದಾಣದಲ್ಲಿ
ತನ್ನ ಕರಗಿದ
ಬಯಕೆಗಳನ್ನೆಲ್ಲಾ ಸಿಂಬಿಸುತ್ತಿ
ಚಳಿಯಲ್ಲಿ ಮಲಗಿದ್ದ
ತಿರುಕನ ಮಗ್ಗುಲಲ್ಲಿ
ಸೇರಿಕೊಂಡ ಬೆಕ್ಕು
ಕನಸು ಅರಿಯಲು ಯತ್ನಿಸಿತು!
4 comments:
ನಿಮ್ಮ ಕನವರಿಕೆಗಳು ಸೊಗಸಾಗಿರುವದರಿಂದಲೇ ಕವನಗಳಾಗಿವೆ!
ನನಗೂ ಹೀಗೆ ಸುಂದರ ಕನವರಿಕೆಗಳು ಬರೋ ಹಾಗೆ ಏನಾದರೂ ಮಾಡಿ :).
ವಂದನೆಗಳು ಸುನಾಥ್ ಹಾಗೂ ಸುಬ್ರಹ್ಮಣ್ಯರಿಗೆ... :)
1. ಇಬ್ಬನಿಯ ಸೂರ್ಯಪಾನದ ಬೆರಗು ಇಷ್ಟವಾಯಿತು.
2. ಇಡೀ ದಿನದ ಕಲ್ಪನೆಯನ್ನು ಮುಂಜಾನೆಯಲ್ಲೇ ರೂಪಿಸಿಕೊಂಡರೆ ದಿನವಿಡೀ ಕರಾರುವಾಕ್ಕು.
3. ಅವನ ಕನಸೇ ಹರಕಲು, ಅದನ್ನೂ ಕೆರೆಯಲು ಹವಣಿಸಿತು ಕಳ್ಳ ಬೆಕ್ಕು.
Post a Comment