ಬೆಂಗಳೂರಿಂದ-ಮಂಗಳೂರಿಗೆ ಬರುವವರನ್ನು ಯಾವಾಗಲೂ ಸೆಳೆಯುತ್ತದೆ ಶಿರಾಡಿ ಘಾಟ್ನ ಅರಣ್ಯ, ಅಲ್ಲಿನ ಇಕ್ಕೆಲಗಳಲ್ಲಿನ ಹೆಸರೇ ಅರಿಯದ ಗಿರಿ ಶಿಖರಗಳು.
ಅಚ್ಚರಿ ಎಂದರೆ ನಾವು ಶಿರಾಡಿ ತಲಪುವಾಗ ಮಳೆ ಮಾಯ! ಗುಂಡ್ಯದಿಂದ ಬಲಕ್ಕೆ ತಿರುಗಿ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಮುಂದುವರಿದೆವು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಎಡಕ್ಕೆ ಕವಲೊಡೆವ ಸಪುರ ರಸ್ತೆಯ ಸಮೀಪವೇ ಮಹೀಂದ್ರ ಟೆಂಪೊ ನಿಲ್ಲಿಸಿ, ಅಲ್ಲಿಂದ ವೆಂಕಟಗಿರಿಗೇ ಚಾರಣ ಆರಂಭ.
ನಾನೂ ಅನೇಕ ಬಾರಿ ಆ ಗಿರಿಗಳ ಮೇಲೇರುವ ಕನಸು ಕಂಡದ್ದಿದೆ. ಶಿರಾಡಿ ಘಾಟಿಯ ಹಚ್ಚ ಹಸಿರಿನ ಸೆರಗಲ್ಲಿ ಹರಿಯುತ್ತದೆ ಕೆಂಪು ಹೊಳೆ. ಇದೀಗ ಈ ಹೊಳೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಮಿನಿ ಹೈಡ್ರೋ ಸ್ಥಾವರ ಸ್ಥಾಪನೆಯಾಗಿದೆ, ಒಂದಷ್ಟು ಹಸಿರನ್ನು ಈ ಸ್ಥಾವರ ನುಂಗಿ ಹಾಕಿದ್ದೂ ಇದೆ.
ಆದರೂ ಪ್ರಕೃತಿಯ ಸಹಚರ್ಯ ಬಯಸುವವರಿಗೆ ಶಿರಾಡಿಯ ಕಾಡು ಬೆಟ್ಟ ಯಾವಾಗಲೂ ಚೇತೋಹಾರಿ. ಇಲ್ಲಿಗೆ ನಡೆದು ನೋಡುವ ಕಾರ್ಯಕ್ರಮವೊಂದನ್ನು ಮಂಗಳೂರಿನ ಚಾರಣಿಗ ಮಿತ್ರ ದಿನೇಶ್ ಹೊಳ್ಳ ಆಯೋಜಿಸಿದ್ದರು. ಮಂಗಳೂರಿನಿಂದ ೨೧ ಮಂದಿಯ ತಂಡ ಹೊರಟಿತು ಶಿರಾಡಿಯತ್ತ. ಮಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಹಾಗಾಗಿ ನಾವು ಹೋಗಬೇಕು ಎಂದಿದ್ದ ಶಿಖರ ‘ವೆಂಕಟಗಿರಿ’ ಹೋಗುವುದು ಸಾಧ್ಯವೇ ಎಂಬ ದಿಗಿಲೂ ನಮ್ಮಲ್ಲಿತ್ತು. ಮಳೆ ಇದ್ದರೆ ಗುಂಡ್ಯದ ರೈಲ್ವೇ ಹಳಿಯಲ್ಲಿ ನಡೆಯುವುದು ಎಂದು ನಿರ್ಧರಿಸಿ ಹೊರಟೆವು.
ಅಚ್ಚರಿ ಎಂದರೆ ನಾವು ಶಿರಾಡಿ ತಲಪುವಾಗ ಮಳೆ ಮಾಯ! ಗುಂಡ್ಯದಿಂದ ಬಲಕ್ಕೆ ತಿರುಗಿ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಮುಂದುವರಿದೆವು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಎಡಕ್ಕೆ ಕವಲೊಡೆವ ಸಪುರ ರಸ್ತೆಯ ಸಮೀಪವೇ ಮಹೀಂದ್ರ ಟೆಂಪೊ ನಿಲ್ಲಿಸಿ, ಅಲ್ಲಿಂದ ವೆಂಕಟಗಿರಿಗೇ ಚಾರಣ ಆರಂಭ.
ಮೇ ತಿಂಗಳಾದ್ದರಿಂದ ಇನ್ನೂ ಅಲ್ಲಲ್ಲಿ ಗೇರು ಹಣ್ಣು. ಹಣ್ಣು ತಿಂದು ಬೀಜ ಅಲ್ಲೇ ಇರಿಸಿ ಮುಂದುವರಿದೆವು. ಅಕಾಲಿಕ ಮಳೆಯಾದ್ದರಿಂದ ತೋಡುಗಳಲ್ಲಿ ಕೆನ್ನೀರು ಹರಿಯುತ್ತಿತ್ತು. ಒಣಗಿದ್ದ ಮರಗಳೆಲ್ಲಾ ತೊಳೆದ ಹಾಗೆ ಕಾಣುತ್ತಿದ್ದವು, ಅಲ್ಲಲ್ಲಿ ಮತ್ತೆ ಹಸಿರು ಕಾಣುತ್ತಿತ್ತು. ಊರಿನವರೇ ಆದ ರಾಜಶೇಖರ್ ಅಲಿಯಾಸ್ ರಾಜಣ್ಣ ನಮಗೆ ಲೋಕಲ್ ಗೈಡ್.
ದೂರದಿಂದ ಎತ್ತರದಲ್ಲಿ ನಮ್ಮ ಚಾರಣ ತಾಣ ವೆಂಕಟಗಿರಿಯ ಬೋಳು ನೆತ್ತಿ ಕೈಬೀಸಿ ಕರೆಯುತ್ತಿತ್ತು.
ಸುಮಾರು ಅರ್ಧ ಗಂಟೆಯ ಪ್ರಯಾಣ ಮಾಡಿ ಊರಿನ ಮನೆಗಳ ನಡುವೆ ಸಾಗುತ್ತಾ ಕಾಡಿನ ಮಡಿಲು ಪ್ರವೇಶಿಸಿದ ನಾವು ಮಂಗಳೂರು-ಬೆಂಗಳೂರು ರೈಲ್ವೇ ಟ್ರಾಕ್ ಸೇರಿದೆವು. ಬೃಹತ್ ಸುರಂಗಮಾರ್ಗವೊಂದು ಅಲ್ಲೇ ಇತ್ತು. ಪಕ್ಕದಲ್ಲೇ ನೀರಿನ ತೋಡು.
ಮೋಡ ಕವಿದಿದ್ದರಿಂದ ಎಲ್ಲರಿಗೂ ಬೆವರು. ಅಲ್ಲೇ ಹಳಿಯ ಪಕ್ಕ ಕುಳಿತು ಒಂದಷ್ಟು ದಣಿವಾರಿಸಿದೆವು. ಬೆಂಗಳೂರಿನತ್ತ ಮುಖಮಾಡಿ ನಿಂತರೆ ಅದುರಿಗೆ ಸುರಂಗ, ಅದರ ಎಡ ಪಕ್ಕದಲ್ಲೇ ಒಂದು ಕಾಡು ದಾರಿ ಮುಂದುವರಿಯುತ್ತದೆ, ಅದರಲ್ಲಿ ಸಾಗಿದರೆ ಅರಣ್ಯ ಇಲಾಖೆಯವರು ರಚಿಸಿದ ಕಲ್ಲಿನ ಗುಪ್ಪೆಯೊಂದು ಸಿಗುತ್ತದೆ. ಕಲ್ಲಿನ ಗುಪ್ಪೆಗೆ ಎದುರೇ ಸಿಕ್ಕುವ ಕಾಲು ಹಾದಿಯೇ ನಮ್ಮ ಚಾರಣದ ಹಾದಿ. ದಾರಿಯಲ್ಲಿ ಹೇರಳವಾಗಿ ಕಂಡು ಬಂದದ್ದು ನಮಗೆ ಆನೆ ಲದ್ದಿ, ಆದರೆ ಆನೆ ಮಾತ್ರ ಎಲ್ಲೂ ನೋಡಲು ಸಿಗಲಿಲ್ಲ. ಅಥವಾ ನಮ್ಮ ತಂಡವನ್ನು ನೋಡಿ ಬೆದರಿ ದೂರ ಹೋಗಿರಲೂ ಬಹುದು. ಇದ್ದರೂ ನಮಗೆ ಕಾಣದಿರಬಹುದು. ಆದರೆ ಈ ಭಾಗದಲ್ಲಿ ಆನೆಗಳ ಗುಂಪೇ ಸಂಚರಿಸುತ್ತದೆ ಎಂಬ ಮಾಹಿತಿ ನಮಗೆ ನೀಡಿದ ರಾಜಣ್ಣ.
ಅಗಾಗ ಮಳೆಹನಿ, ತೇವಗೊಂಡ ಹುಲ್ಲು ತುಂಬಿದ ನೆಲ, ಮೇಲೆ ಹೋದಂತೆ ಕಾಡಕಿಚ್ಚು ಬಿದ್ದು ಸುಟ್ಟ ಮರ, ಹುಲ್ಲಿನ ಗಡ್ಡೆ ಕಂಡುಬಂದವು, ಮಳೆಯಾದ್ದರಿಂದ ಮರ, ಹುಲ್ಲು ಮತ್ತೆ ಚಿಗುರತೊಡಗಿದ್ದವು. ಎಡಕ್ಕೆ ನೋಡಿದರೆ ದಟ್ಟ ಅರಣ್ಯ, ಬಲಕ್ಕೆ ನೋಡಿದರೆ ಹತ್ತಿಯಂಥ ಮೋಡ ಹೊದ್ದು ಮುಗುಮ್ಮಾಗಿ ಕುಳಿತಿದೆ ‘ಮುಗಿಲಗಿರಿ’ ಶಿಖರ. ಎಲ್ಲಾ ಕಾಲದಲ್ಲೂ ಒಂದಷ್ಟು ಮೋಡಗಳನ್ನು ತನ್ನ ಹತ್ತಿರವೇ ಇರಿಸುವ ಕಾರಣ ಆ ಹೆಸರು ಪಡೆದುಕೊಂಡಿದೆ ಮುಗಿಲಗಿರಿ ಎಂಬ ಮಾಹಿತಿಕೊಡುತ್ತಾರೆ ದಿನೇಶ್ ಹೊಳ್ಳ.
ಗುಡ್ಡ ಏರುತ್ತಾ ಹೋದಂತೆ ಮರಗಳು ಕಡಮೆಯಾದವು, ಅಲ್ಲೊಂದು ಇಲ್ಲೊಂದು ನೆಲ್ಲಿ ಮರಗಳು. ಕೆಲವದರಲ್ಲಿ ಇನ್ನೂ ನೆಲ್ಲಿಕಾಯಿ ಉಳಿದಿತ್ತು. ನಮ್ಮಲ್ಲಿನ ‘ಹುಡುಗುಬುದ್ಧಿ’ ಕಲ್ಲು ಎಸೆಯುವಂತೆ ಪ್ರೇರೇಪಿಸದೆ ಇದ್ದೀತೇ, ದೊಡ್ಡವರೂ ಚಿಕ್ಕವರಾಗಿ ನೆಲ್ಲಿಕಾಯಿ ಉದುರಿಸಿದೆವು. ನೆಲ್ಲಿಕಾಯಿ ಸವಿಯುತ್ತ, ಅದರ ಮೇಲೆ ನೀರು ಕುಡಿದು ಆ ಸಿಹಿ ಅನುಭವಿಸುತ್ತಾ ಹೋಗುವಾಗ ಆಯಾಸ ಪರಿಹಾರ. ವೆಂಕಟಗಿರಿಯ ತುದಿಯೂ ಹತ್ತಿರವಾಗುತ್ತಿತ್ತು.
ಸುತ್ತ ನೋಡಿದರೆ ಬೇರೆ ಬೇರೆ ಶಿಖರ ಸಾಲು. ಅಮೇದಿಕಲ್ಲು, ಎತ್ತಿನಭುಜ, ಗಡಾಯಿಕಲ್ಲು, ಮಿಂಚುಕಲ್ಲು, ಇನ್ನೂ ಹಲವಾರು, ಕೆಳಗೆ ನೋಡಿದರೆ ಹಾವಿನಂತೆ ಕಾಣುವ ಕೆಂಪುಹೊಳೆ, ಅದರ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ೪೮.
ಸುಮಾರು ಮೂರು ಗಂಟೆಯ ಚಾರಣ ಸಾಕು ವೆಂಕಟಗಿರಿ ತಲಪಲು. ಶೇ.೯೦ರಷ್ಟು ಸುಲಭ ಚಾರಣವಾದರೆ, ಕೊನೆಯಲ್ಲಿ ಶಿಖರ ತಲಪುವಾಗ ಒಂದಷ್ಟು ಏದುಸಿರು ಖರ್ಚಾಗುತ್ತದೆ!
ಮೇಲೆ ತಲಪಿದರೆ ಬೋಳುಗುಡ್ಡ, ಒಂದೆರಡು ಕಲ್ಲಿನಗುಪ್ಪೆ, ಬಿರುಬೀಸು ಗಾಳಿ, ಅಷ್ಟೇ ಲಭ್ಯ. ಅದು ಬಿಟ್ಟರೆ ಸುತ್ತಲಿನ ಪ್ರಕೃತಿಯ ರಮ್ಯನೋಟ.
ಮಧ್ಯಾಹ್ನದ ಊಟಕ್ಕಾಗಿ ತಂದಿದ್ದ ಮೂಡೆ (moode) ಹೊಟ್ಟೆಗಿಳಿಸಿ, ಮತ್ತೆ ಕೆಳಕ್ಕಿಳಿದೆವು. ಕಲ್ಲುಗಳು ಬುಡ ಹಸಿಯಾದ ಕಾರಣ ಅಲುಗಾಡುತ್ತಿದ್ದು, ಎಚ್ಚರಿಕೆಯಿಂದ ಇಳಿಯಬೇಕಿತ್ತು, ಹಾಗಾಗಿ ಇಳಿಯಲೂ ಅಷ್ಟೇ ಸಮಯ ಬೇಕು.
ಇಳಿಯುವಾಗಲೂ ನಮ್ಮನ್ನು ಆಕರ್ಷಿಸುತ್ತಿದ್ದುದು, ಆ ಕಾಡು, ಆ ಬಿದ್ದ ತರಗೆಲೆ, ಮೋಡ ಕವಿದ ಮುಗಿಲಗಿರಿ, ಬೋಳು ತುದಿಯ ವೆಂಕಟಗಿರಿ.......
ಚಿತ್ರ : ಸುನಿಲ್
6 comments:
ಸುಂದರವಾಗಿತ್ತಲ್ವೇ ವೆಂಕಟಗಿರಿ ಚಾರಣ? ಹಾಗೇನೇ ನೆಲ್ಲಿಕಾಯಿ ಸಿಹಿಯೂ ಚಾರಣದ ಆನಂದವನ್ನು ಹೆಚ್ಚಿಸಿತು. ಮುಗಿಲಗಿರಿಯ ನೋಟವಂತೂ ಬಲೂ ಸುಂದರವಾಗಿತ್ತು. ಆದರೆ ಶೇಕಡಾ ೯೦ ಭಾಗ ಸುಲಭ(?!) ಚಾರಣ ಎಂಬ ಮಾತಿಗೆ ನನ್ನ ವಿರೋಧವಿದೆ....
ಸುಂದರ ಚಾರಣ ಚಿತ್ರಗಳಿಗೆ ತಕ್ಕುದಾದ ಬರಹ
ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಕೆಲವು ಪ್ಯಾರಾಗಳನ್ನು ರೈಟ್ ಅಲೈನ್
ಮಾಡಿರ್ಬೇಕು ಅನ್ಸತ್ತೆ. ಓದಲು ಕಷ್ಟ ಆಗ್ತಿದೆ. ಆದರೂ ಬರಹದ ಮೋಡಿಯಲ್ಲಿ
ನಾನೆಲ್ಲವನ್ನೂ ಮರೆತೆನು :P
ಮತ್ತೆ ಮತ್ತೆ ಬರುವೆ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಮುಗಿಲ ಗಿರಿಯ ನೋಟ ಮನಸ್ಪರ್ಶಿ,ಪೊರ್ಲುಂಡು
ಚಿತ್ರಾ
ರಾಜೇಶ್,
ನಿಮ್ಮ ವಿರೋಧಕ್ಕೆ ಸ್ವಾಗತವಿದೆ :) ಹೌದು ನೆಲ್ಲಿಕಾಯಿ ಸೂಪರು.
ಶ್ರೀನಿವಾಸರೇ,
ಹೌದು, ಅಲೈನ್ಮೆಂಟ್ ಪ್ರಾಬ್ಲಮಾಗಿದೆ, ಸರಿ ಮಾಡುವೆ. ಬರ್ತಾ ಇರಿ.
ಚಿತ್ರಾ,
ಥ್ಯಾಂಕ್ಸ್, ಎನ್ನ ಬ್ಲಾಗ್ಗ್ ಸ್ವಾಗತೊ, ಬರೋಂದಿಪ್ಪುಲೆ :)
Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Monitor de LCD, I hope you enjoy. The address is http://monitor-de-lcd.blogspot.com. A hug.
[url=http://www.realcazinoz.com]Online casinos[/url], also known as accepted casinos or Internet casinos, are online versions of time-honoured ("buddy and mortar") casinos. Online casinos carry gamblers to ‚lite up and wager on casino games assiduously the Internet.
Online casinos habitually twist on the bazaar odds and payback percentages that are comparable to land-based casinos. Some online casinos contend higher payback percentages as a countermeasure with a view m‚series automobile games, and some transmogrify known payout concord audits on their websites. Assuming that the online casino is using an correctly programmed unspecific assorted generator, detail games like blackjack on presentation an established congress edge. The payout weakness for as a replacement fit these games are established at within reach of the rules of the game.
Heterogeneous online casinos sublease revealed or discern their software from companies like Microgaming, Realtime Gaming, Playtech, Supranational Contrivance Technology and CryptoLogic Inc.
Post a Comment