13.5.07

ಅಮ್ಮನೆಂಬ ವಿಸ್ಮಯ

ಮನತುಂಬ ಮ್ಲಾನತೆ
ತಲೆತುಂಬಿ ಒಡೆದು
ಹೋಗುವಷ್ಟು ಬರಸಿಡಿಲು

ಆದರೂ..
ತಂದೀತು ಒಂದಿಷ್ಷು
ಸಮಾಧಾನ ಅಮ್ಮನ ಮಡಿಲು

ಬದುಕಿನ ಉದ್ದಕ್ಕೂ
ಓಡುತ್ತಲೇ ಇರುವಾಗ
ಎಲ್ಲೋ ಎಡವಿ ಕೈಕಾಲು
ತರಚಿಕೊಂಡರೂ
ಥಟ್ಟನೇ ನುಗ್ಗಿ
'ಏನ್ ಮಾಡ್ಕೊಂಡ್ಯೋ'
ಎಂಬ ಪ್ರೀತಿ-ಸಿಟ್ಟಿನ
ಮುಲಾಮು ಹಚ್ಚುವುದು
ಆಕೆಗೆ ಹವ್ಯಾಸ!

ನೋವಲ್ಲಿ ಮಾತಾಗಿ
ಖುಷಿಯಲ್ಲಿ ಮೌನವಾಗಿ
ಬದುಕಿಡೀ ಒಗಟಾಗಿ
ಒಮ್ಮೊಮ್ಮೆ ಒಗರಾಗಿ
ಮಕ್ಕಳ ನಗುವಿಗೇ ಖುಷಿಯಾಗಿ
ಇರುವಾಕೆ....
ಯಾಕೆ ಹೀಗೆ? ಈಕೆ
ಎನ್ನುವುದೇ ಪ್ರಶ್ನೆ.

ಮಕ್ಕಳಿಗಾಗಿ ಏನನ್ನಾದರೂ
ಮಾಡುವೆ ಎಂಬ ಛಲ
ಅದಮ್ಯ ಚೇತನದ ಖಣಿ
ಆ ಅಪೂರ್ವ ಸಾಮರ್ಥ್ಯ
ಬಂತು ಎಲ್ಲಿಂದ!

(ಮಕ್ಕಳಿಗಾಗಿ ಸರ್ವಸ್ವವನ್ನೂ ಧಾರೆಯೆರೆವ ‘ವಿಶ್ವದ ವಿಸ್ಮಯ’ ಎನಿಸಿದ ಅಮ್ಮನಿಗಾಗಿ ಈ ಸಾಲುಗಳು)

7 comments:

ರಾಜೇಶ್ ನಾಯ್ಕ said...

ವೇಣು,

ಆಹಾ, ಎಂಥಾ ಸುಂದರ ಸಾಲುಗಳು. ಓಡಿ ಹೋಗಿ ಅಮ್ಮನ್ನನ್ನೊಮ್ಮೆ ತಬ್ಬಿಕೊಳ್ಳುವಂತೆ ಮಾಡಿತು ಈ ಸಾಲುಗಳು.
ಅಂದ ಹಾಗೆ ಚಿತ್ರ ಎಲ್ಲಿ ಸಿಕ್ತು?

Chevar said...

ಸೊಗಸಾದ ಸಾಲುಗಳು. ಚೆನ್ನಾಗಿದೆ.

Jagali bhaagavata said...

ಚೆನ್ನಾಗಿದೆ. ಚಿತ್ರ ನಿಮ್ಮದೇನಾ?

VENU VINOD said...

ರಾಜೇಶ್, ಮಹೇಶ್, ಭಾಗವತ
ಮೆಚ್ಚಿದಕ್ಕೆ ಧ.ವಾ.ಗಳು.
ಚಿತ್ರ ನನ್ನದಲ್ಲ. ಜಾಲಾಡಿದಾಗ ಸಿಕ್ಕ ಚಿತ್ರ ಇಳಿಸಿದ್ದು:)

ವಿ.ರಾ.ಹೆ. said...

ಚೆನ್ನಾಗಿದೆ. ಅಮ್ಮ ಎಂಬುದು ನಿಜಕ್ಕೂ ಅದ್ಭುತ ಸೃಷ್ಟಿ.

PRAVINA KUMAR.S said...

ನೀವು ಕವಿನೂ ಹೌದ?. ನಾನು ಕೇವಲ ಪತ್ರಕರ್ತರು ಅಂತ ಮಾಡ್ಕೊಂಡಿದ್ದೆ. ಅಮ್ಮನ ಕುರಿತ ಕವನ ತುಂಬಾ ಚೆನ್ನಾಗಿದೆ.

ಕುಂಟಿನಿ said...

well done venu

Related Posts Plugin for WordPress, Blogger...