ನನ್ನೊಳಗೆ ನಾನೇ ಹೊಕ್ಕು
ನೋಡಿದರೆ
ಒಳಗಿಂದೊಳಗೇ ಕಳೆದುಹೋಗಿದ್ದೇನೆ
ನಗರದ ಗಗನಚುಂಬಿಗಳು,
ನಿಯಾನ್ ಸೈನ್ಗಳ
ರಂಗಲ್ಲಿ ಮಂಕಾಗಿದ್ದೇನೆ
ಭೂಮಿಯನ್ನೇ ನುಂಗಿ ನೀರು
ಕುಡಿಯುವಂತ ಮಳೆಯ ಅಬ್ಬರಕ್ಕೆ
ಕುಡಿಯುವಂತ ಮಳೆಯ ಅಬ್ಬರಕ್ಕೆ
ಸ್ತಬ್ದನಾಗಿದ್ದೇನೆ
ವಿಶೇಷ ಆರ್ಥಿಕ ವಲಯಗಳ
ಹಿಂದಿನ ಬಾಡಿದ ಗದ್ದೆ
ಪೈರುಗಳಲ್ಲಿ
ನಿಶ್ಯಕ್ತ ಬೀಜವಾಗಿದ್ದೇನೆ....
ಥತ್...
ಇನ್ನೂ ಏನೇನೋ ಆಗಿಬಿಡುತ್ತೇನೆ
ಪೊಲೀಸ್ ಠಾಣೆಯಲ್ಲಿ
ನನ್ನ ಪೋಸ್ಟರ್ ಬಿದ್ದಿದೆ
ನಾನು ಕಳೆದುಹೋಗಿದ್ದೇನೆ
ಹಾಗಾಗಿ...
ನಾನು ಬೇಕಾಗಿದ್ದೇನೆ
7 comments:
ನನಗೆ ತುಂಬಾ ಇಷ್ಟವಾಗುವ ಬ್ಲಾಗ್ ಇದು. ಆ ನಿಮ್ಮ ಪುಟ್ಟ ಪುಟ್ಟ ಕವನಗಳು ಆ ಚಿತ್ರಗಳು ವಂಡರ್ ಫುಲ್ ಸರ್.ಹೀಗೆನೇ ಬರೆಯುತ್ತಿರಿ ಎಂದೆಂದಿಗೂ...
'ಥತ್' ಆದ್ಮೇಲೆ ಬರೆದದ್ದು ಸೂಪರಾಗಿದೆ..
ಪತ್ರಕರ್ತರ ಮನಸಿನ ದ್ವಂದ್ವವನ್ನು ಚೆನ್ನಾಗಿ ಬಿಡಿಸಿ ಹೇಳಿದ್ದೀರ... ಎಲ್ಲ ಪತ್ರಕರ್ತರೂ ಕಳೆದುಕೊಂಡ ತಮ್ಮನ್ನು ಹುಡುಕಿತಂದರೆ ಎಷ್ಟು ಚೆನ್ನಾಗಿರ್ತದೆ..
ಹಾಗಾಗಿ...
ನಾನು ಬೇಕಾಗಿದ್ದೇನೆ
ಪೊಲೀಸಿನವರಿಗೆ.
ವಿಶೇಷ ಆರ್ಥಿಕ ವಲಯಗಳ
ಹಿಂದಿನ ಬಾಡಿದ ಗದ್ದೆ
ಪೈರುಗಳಲ್ಲಿ
ನಿಶ್ಯಕ್ತ ಬೀಜವಾಗಿದ್ದೇನೆ....
ಒಳ್ಳೆಯ ಕವನ ವೇಣು.ತಟ್ಟಿತು.
ವೀಣಾ,
ನನ್ನ ಬ್ಲಾಗ್ಗೆ ಸ್ವಾಗತ. ನಾನು ಗೀಚಿದ್ದು ಮೆಚ್ಚಿಕೊಂಡದ್ದಕ್ಕೆ ಧನ್ಯವಾದ, ಬರುತ್ತಿರಿ.
ರಾಜೇಶ್, ವಂದನೆಗಳು
ಶ್ರೀ,
ಪತ್ರಕರ್ತರು ಮಾತ್ರವಲ್ಲ, ಎಲ್ಲರೂ ಬದಲಾದರೆ ಎಷ್ಟು ಒಳ್ಳೆಯದಲ್ಲವೆ:)
ಪ್ರವೀಣ್,
ಕವನದ ಮುಂದುವರಿಕೆಯೇ?
ಶ್ರೀನಿಧಿ,
ಕವನ ಮನ ತಟ್ಟಿದರೆ ಸಾರ್ಥಕ. ವಂದನೆ.
ಜಾಗತೀಕರಣ, ಅಮಾನವೀಯತೆ, ಕೊಳ್ಳು ಬಾಕತನ, ಕಲುಷಿತ ವಾತಾರಣ, ಅಡ್ಡ ಹಾದಿ ಹಿಡಿದ ನಕ್ಸಲ್ ಚಳುವಳಿ ಹಾಗು ಅದರ ಗುರಿಗಳ ನಡುವೆ ಕಳೆದು ಹೋದ ಮನುಷ್ಯನನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿದಲ್ಲಿನ ಒಂದು ಜ್ವಲಂತ ಕವಿತೆ!!
ಹ್ಯಾಟ್ಸಾಫ್ ವೇಣು!!
Post a Comment