ಕನಸಿನಂತಹ
ಮುತ್ತುಗಳನ್ನು
ಆಯ್ದಿದ್ದೇನೆ...
ಹಿಡಿತುಂಬಾ ಇರುವಮುತ್ತುಗಳನ್ನು
ನಿನ್ನ ಕಂಪಾಸುಪೆಟ್ಟಿಗೆ ತುಂಬಲು
ಜೋಪಾನವಾಗಿ ತೆಗೆದಿರಿಸಿದ್ದೇನೆ....
ಕಾಡುಮೇಡುಗಳಲ್ಲೇ
ಅಡ್ಡಾಡುವ
ಸುಂದರ ತಣ್ಪನ್ನು
ಎದೆಯಲ್ಲಿ ತುಂಬಿಕೊಂಡು
ಮರಳಿದ್ದೇನೆ..
ನೀ ಹೃದಯದಾಸರೆ
ಪಡೆವಾಗ ತಂಗಿ
ಒಂದಿಷ್ಟು ತಂಪು ಹಂಚಿಕೊಳ್ಳಬಹುದು...
ಅಕ್ಷರಲೋಕದ ಉದ್ದಗಲ
ಓಡಾಡಿ ನಮ್ಮ
ಬಾಂಧವ್ಯದ
ಹರವು ವಿವರಿಸಲಾಗದೆ
ಸೋತಿದ್ದೇನೆ
ನನ್ನನ್ನು ಕ್ಷಮಿಸಿ
ಈ ಸೋದರನಿಗೊಂದು
ಪಪ್ಪಿ ಕೊಡುವೆಯಾ ಪುಟ್ಟಿ!
(ರಕ್ಷಾ ಬಂಧನ ದಿನ ಲೇಟಾಗಿ ಹೋಗಿದ್ದಕ್ಕೆ ಮುಖವೂದಿಸಿ ಕುಳಿತಿದ್ದ ತಂಗಿಗೆ......)
7 comments:
ನೋ ಡೌಟ್ ನಿಮ್ ತಂಗಿ ಫುಲ್ ಖುಶ್ ಆಗಿರ್ತಾಳೆ ಇದನ್ನ ಓದಿ.. :-)
ನೀವು ಆಯುವ ಚಿತ್ರಗಳು ನಿಜಕ್ಕೂ ಚಂದ ಚಂದವಾಗಿರ್ತಾವೆ. ಅಥವಾ ಅವು ನೀವೇ ತೆಗೆದ/ಬಿಡಿಸಿದ ಚಿತ್ರಗಳೋ?
ಆಹಾ! ತುಂಬಾ ಚನ್ನಾಗಿದೆ ಕವಿತೆ. ನಿಮ್ಮ ತಂಗಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಇರಲಾರದು.
neevu late aagi hodre, paapa nimma tangi inenu maaDthare. yenu bari kavanadinda santosha paDisudro, athava uDugore unTo? ;)
ಸಕತ್ ಆಗಿಯೇ ತಂಗಿಯನ್ನು ಮುದ್ದಿಸಿದ್ದೀರಿ.
ಥ್ಯಾಂಕ್ಸ್ ಸುಶ್ರುತ, ಕೆಲವು ಚಿತ್ರಗಳು ನಾನು ತೆಗೆದಿರುವುದು ಅಥವಾ ರಚಿಸಿದ್ದು, ಇನ್ನು ಕೆಲವು ಅಂತರ್ಜಾಲದ ಕೃಪೆ:)
ರಂಜು,
ಮಂಜುಮುಸುಕಿದ ದಾರಿಗೆ ಸ್ವಾಗತ:)ವಂದನೆ, ಬರುತ್ತಿರಿ
ಮೌನ,
ಉಡುಗೊರೆ ಕೊಡದಿದ್ರೆ ಬಿಟ್ತಾಳಾ, ಕೊಲ್ತಾಳೆ:)
ಪ್ರವೀಣ್,
ಬೆಣ್ಣೆ ಹಚ್ಚಿದ್ದು:)
Reading your blog for the first time.
It has come up very nice. Seeing Kannada bloom on the net in this way is all the more heartening.
Pls keep up the good work !
And yes, I thoroughly enjoyed that Raakhi poem.
Best wishes
Tonapi
Post a Comment