17.12.07

ಒಂದು ಅರಿಕೆ....ಗುಲಾಬಿ ಮೊಗ್ಗಿನ ಮೇಲೆ
ಮಂಜುಹನಿ
ತೊಟ್ಟಿಕ್ಕುವಾಗ..

ಅದರ ಸುತ್ತ
ದುಂಬಿಯೊಂದು
ಅರಳಲು ಕಾಯುತ್ತ
ಗುಂಯ್‌ಗುಡುವಾಗ
ನನಗೆ ನೀನು ಬೇಕನಿಸುತ್ತದೆ..


ಹಸಿರುಬೇಲಿ ಪಕ್ಕದ
ದಾರಿಯುದ್ದಕ್ಕೆ
ಹೀಗೇ ಸುತ್ತಾಟಕ್ಕೆ
ಇಳಿವಾಗ ಹಾದಿ
ಬದಿಯ ಗುಡಿಸಲಿಂದ
ಹೊರಬಿದ್ದ ನಸುನೀಲಿ
ಹೊಗೆ, ಹಿಮದೊಂದಿಗೆ ಬೆರೆತು
ಮನವನ್ನೂ ಆವರಿಸಿದಾಗ
ಹೃದಯದ ಭಿತ್ತಿಯಲ್ಲಿ
ಮೂಡುವ ಬಿಂಬ ನೀನು..

ಶುಂಠಿ ಚಹಾ
ಕಪ್ಪಿನಲ್ಲಿ ಆರುತ್ತಿದೆ
ಛಳಿ ಮೈಯೊಳಗೆ ಕೊರೆಯುತ್ತ
ಇಳಿದಿರಲು..
ಬಂದುಬಿಡು ಹೀಗೇ ನನ್ನೊಳಗೆ
ಆವರಿಸಿಬಿಡು
ಮನದ ಮೂಲೆಯ
ನಮ್ಮ ಕನಸಗೂಡೊಳಗೆ....
ಚಿತ್ರ ಇಂಟರ್‌ನೆಟ್‌ ಕೃಪೆ

1 comment:

ತುಂಟ ಹುಡುಗರು said...

ಚೆಂದನೆಯ ಕವಿತೆ. ಸೊಗಸಾಗಿ ಬರಲಿ.

Related Posts Plugin for WordPress, Blogger...