22.12.07

ಮೂರು ಬಿಂದುಗಳು


ಬೆಳಗಾದರೂ ಕತ್ತಲ
ತೆರೆ ಸರಿಯದ ಬೀದಿಗಳಲ್ಲಿ
ಕಸಹೊಡೆಯುತ್ತಿದ್ದಾಳೆ
ಹರಕು ಸೀರೆ ಈರಮ್ಮ...
ಇಲ್ಲಿ
ಮನೆಮೂಲೆಯಲ್ಲಿ
ಬಿದ್ದಿರುವ
ಪೊರಕೆಗೆ
ಜೇಡರಬಲೆ ತುಂಬಿಕೊಂಡಿದೆ


*************


ಬಾವಿ ಇದೆ
ನೀರೂ ಸಾಕಷ್ಟಿದೆ
ಹಗ್ಗ ಜೋತುಬಿದ್ದಿದೆ
ಬಳಲಿಬೆಂಡಾದ
ನಾಯಿ
ನೀರಿಗಾಗಿ ಅಲೆದಾಡುತ್ತಿದೆ!

*************


ಹೊಟ್ಟೆಬಿರಿಯುವಂತೆ ತಿಂದು
ಮಧ್ಯಾಹ್ನ ನಿದ್ದೆಗಿಳಿದರೆ
ಘನಘೋರ ಕನಸುಗಳು
ನನ್ನನ್ನೇ ತಿಂದು
ಮುಗಿಸಲು ಹೊರಟಿವೆ
ಕನಸುಗಳಿಗೆ ರಾತ್ರಿ
ಬರಲು ಹೇಳಿದ್ದೇನೆ
ಆಕೆಯ ಕನಸು
ಕಣ್ಣಲ್ಲಿ ತುಂಬಿಕೊಂಡರೆ
ಕಠೋರ ಕನಸುಗಳು
ರಾತ್ರಿ ಬರಲಾರವೇನೋ!

2 comments:

ನಾವಡ said...

ಬಹಳ ದಿನಗಳಾಗಿದ್ದವು ನಿಮ್ಮ ಬ್ಲಾಗ್ ಗೆ ಬಂದು.
ನವಿರು ಸಾಲು ಓದಿದೆ ಖುಷಿಯಾಯಿತು. ನಿಜಕ್ಕೂ ನವಿರಾಗಿವೆ.
ನಾವಡ

VENU VINOD said...

ನಾವಡರ ಪ್ರತಿಕ್ರಿಯೆಗೆ ಧನ್ಯವಾದ
ಬರುವುದ ಕೈಬಿಡಬೇಡಿ, ನೀವೆಲ್ಲ ಬಂದುಹೋಗುತ್ತಿದ್ದರೆ ತಾನೇ ನಮಗೂ ಬರೆಯುವ ಉತ್ಸಾಹ!

Related Posts Plugin for WordPress, Blogger...