7.2.08

ಒಂದಿಷ್ಟು ಬಡಬಡಿಕೆ...

ಭುವಿತುಂಬ ಎದ್ದ
ಉರಿ ಧಗೆಗೆ
ಮುಗಿಲು ಹನಿ ಸುರಿಸುತ್ತಿಲ್ಲ,
ಮೋಡ ಬಿತ್ತನೆಯಾಗಬೇಕು!

ನಿನ್ನ ಕಂಗಳ ಅಯಸ್ಕಾಂತಕ್ಕೆ
ಸಿಲುಕಿದ
ನೇತ್ರದ ನಗೆ
ಇದ್ದಲ್ಲೇ ವಿಗ್ರಹವಾಗೆ
ಕಣ್ಣಸನ್ನೆಗೆ ಮಾವು ಹೂಮಳೆ
ಗರೆಯಬೇಕು

ಮಾತೇ ಆಡದೆ
ಮನದೊಳಗೆ ನುಗ್ಗಿ
ಗುಟ್ಟು ಹೇಳಿ
ಹೋಗುವ ನಿನ್ನ
ಬಿಸಿಯುಸಿರಿನಲ್ಲಿ
ನನ್ನ ಕನಸುಗಳು
ಕಾವು ಪಡೆಯಬೇಕು!

4 comments:

ಮನಸ್ವಿನಿ said...


ಮಾತೇ ಆಡದೆ
ಮನದೊಳಗೆ ನುಗ್ಗಿ
ಗುಟ್ಟು ಹೇಳಿ
ಹೋಗುವ ನಿನ್ನ
ಬಿಸಿಯುಸಿರಿನಲ್ಲಿ
ನನ್ನ ಕನಸುಗಳು
ಕಾವು ಪಡೆಯಬೇಕು!


ವಾಹ್ !!

ನಾವಡ said...

ವೇಣು,
ನಿನ್ನ ಹೊಸ ಕವನ ಚೆನ್ನಾಗಿದೆ. ನಿನ್ನ ಕನಸುಗಳು ಕಾವನ್ನು ಪಡೆಯಲಿ ಅವಳ ಉಸಿರಲ್ಲಿ !

ಮನಸ್ವಿನಿ ಉಲ್ಲೇಖಿಸಿದ ಸಾಲುಗಳು ನನಗೂ ಇಷ್ಟವಾದವು.
ನಾವಡ

Shiv said...

ವೇಣು,

ಕನಸುಗಳ ಕಾವು ಪಡೆಯುತಿರಲಿ..

>>ಮಾವು ಹೂಮಳೆ
ಗರೆಯಬೇಕು

ಪಾಪ,ಮಾವು ಹೂಮಳೆಗೆರೆದರೆ ಕಾಯಿ ಎಲ್ಲಿ ಸಿಗುತ್ತೆ ರೀ :)

ಇಷ್ಟವಾಯ್ತು ನಿಮ್ಮ ಕವನ

ರಾಧಾಕೃಷ್ಣ ಆನೆಗುಂಡಿ. said...

ಮರಳಿ ಬ್ಲಾಗ್ ಗೆ ಬಂದಿದ್ದೇನೆ. ಅಭಿಪ್ರಾಯ ತಿಳಿಸಿ

Related Posts Plugin for WordPress, Blogger...