ಅದೃಷ್ಟಶಾಲಿ!
ತಮ್ಮ ಭವ್ಯಭವಿತವ್ಯಕ್ಕೆ
ಗರಿಗರಿ ನೋಟು ಕಾಪಿಡುವವರು
ಅವರ ನಾಳೆಗಳಿಗೆ
ತೊಂದರೆಯಾಗದಂತೆ
ಗಡಿಯಲ್ಲಿ ನುಸುಳುವವರನ್ನು
ಹೊಡೆದುರುಳಿಸಲು
ಕಣ್ಗಾಹಿ ಯೋಧರು
ಬೋಲೋ ಮೇರೆ ಸಂಗ್.. ಜೈಹಿಂದ್
ಈ ದೇಶದ ಬಡವರು
ಅದೆಷ್ಟು ಪುಣ್ಯವಂತರು
ಅವರಿಗಾಗಿನೂರೆಂಟು ಯೋಜನೆಗಳು
ಯೋಚನೆಗಳು
ಬುಲೆಟ್ಪ್ರೂಫ್ ಕಾರಿನಲ್ಲಿ
ಓಡಾಡುವರ
ಕಡತಗಳಲ್ಲಿ
ಬೆಚ್ಚಗೆ ಮಲಗಿವೆ
ದೇಶದ ಕನಸುಗಳು
ಬೋಲೋ ಮೇರೇ ಸಂಗ್ ಜೈಹಿಂದ್
ಬಲು ಭಾಗ್ಯವಂತರು
ಈ ಮಹಾನ್ ದೇಶದ
ಪುಟ್ಟ ಕಂದಮ್ಮಗಳು
ಬೆನ್ನ ಚೀಲದಲ್ಲಿ
ಹೊಸಜಗತ್ತು
ನಿರ್ಮಾಣದ ಹೊರೆ
ಹೊತ್ತ ವಿಶ್ವಮಾನವರು
ಬೋಲೋ ಮೇರೇ ಸಂಗ್ ಜೈ ಹಿಂದ್
8 comments:
ದೇಶಪ್ರೇಮ ಜೋಕ್ ಆಗಿ ಬಿಟ್ಟಿದೆ ಅನಿಸ್ತದೆ... ಗಾಂಧಿ ಜಯಂತಿಯಂದು ಟೋಪಿ ಹಾಕಿ ಪೋಸ್ ಕೊಡೋ ಥರ! ಸಿಂಬಾಲಿಕ್ ಆಗಿರೋದೇ ಮಹಾನ್ ದೇಶಪ್ರೇಮ ಅನ್ನೋ ಥರ... ಉಗ್ರರು ಕಾಲಡಿಗೆ ಬಂದರೂ ನಮ್ಮ ಬಡಬಡಿಕೆ ಮಾತ್ರ ಹಾಗೇ ಮುಂದುವರಿದಿದೆ
ಕವನ ಚೆನ್ನಾಗಿದೆ. ಮತ್ತೆ Photoshoping ನಿಮ್ದಾ? :)
ಜೈ ಹಿಂದ್!!!!
witty.
ಕೃಷ್ಣ
'ಉಗ್ರರು ಕಾಲಡಿಗೆ ಬಂದರೂ ನಮ್ಮ ಬಡಬಡಿಕೆ ಮಾತ್ರ ಹಾಗೇ ಮುಂದುವರಿದಿದೆ' ಈಧೂ ಎಲ್ಲಿವರೆಗೆ ಮುಂದುವರಿಯಬೇಕೋ!
ತೇಜಸ್ವಿನಿ,
ಧನ್ಯವಾದ...ಫೋಟೋಶಾಪಿಂಗ್ ನಂದು :)
ಮಾಂಬಾಡಿ, :)
ಕೇರ, ಯೆಸ್ :)
ಕವನ ಸೊಗಸಾಗಿದೆ. ಸದ್ಯದ ಪರಿಸ್ಥಿತಿಗೆ ತಕ್ಕಂತೆ ಇದೆ. ಫೋಟೋ ಕೂಡ ಚೆನ್ನಾಗಿದೆ.
ಕವನ ಚೆನ್ನಾಗಿದೆ ವೇಣು.
ವ್ಯಂಗ್ಯದ ಜೊತೆ ವಾಸ್ತವ, ವಾಸ್ತವದ ಜೊತೆ ವಿಷಾದ, ವಿಷಾದದ ಜೊತೆ ಹೊಸ ಕನಸು, ಅದು ನನಸಾದೀತೆ ಎಂಬ ಅಳುಕು- ಎಲ್ಲವೂ ಚೆನ್ನಾಗಿ ಮೂಡಿಬಂದಿವೆ.
- ಚಾಮರಾಜ ಸವಡಿ
ನಮಸ್ತೆ ವಿನೋದ್ ಅವರಿಗೆ. :)
ಮಾರ್ಮಿಕವಾಗಿದೆ ಬರಹ.
Post a Comment