ಒಮ್ಮೆ ಮಾತನಾಡಿಬಿಡು
ದಿನಾ ಮೊಬೈಲ್
ದಿನಾ ಮೊಬೈಲ್
ಫೋನ್ ಸ್ಪೀಕರಿಗೇ
ಕಣ್ಣೀರಿನ ಅಭಿಷೇಕದಿಂದ
ಕಲೆಯಾಗಿದೆ
ಕಿವಿಯನ್ನೇ ಮೊಗವಾಗಿಸಿ
ಅತ್ತುಕರೆದಾಗಿದೆ
ಹಾಗೇ ಎದ್ದು ಬಂದು ಬಿಡು
ಬೆಳದಿಂಗಳ ರಾತ್ರಿಯಲ್ಲಿ
ಕಣ್ಣಿಗೆ ಕಣ್ಣು ನೆಡು...
ಕಕ್ಕುಲತೆ, ಒಲವು
ಕಣ್ಣಲ್ಲಿ ಅದೆಂತಹ ಕಾವು
ಹೇಳುವ ಮಾತಿಗೆ
ಇಷ್ಟೇ ಜಾಡು
ಅಳತೆಯಿಲ್ಲದಷ್ಟು ಎದೆಯಲ್ಲಿರಿಸಿ
ಭ್ರಮಣ ಸಾಕುಮಾಡಿನ್ನು
ನಿಜಪಯಣ
ಬಂದುಬಿಡು ಹಾಗೇ ಕಣ್ಣಲ್ಲೊಮ್ಮೆ ಹೀರಿಬಿಡು!
8 comments:
ವೇಣುರವರೆ,
ನಿಮ್ಮ ಬಿಕ್ಕಳಿಕೆಯ ಫಲ ಲಭಿಸಲಿ ಎಂದು ಆರೈಸುತ್ತೇನೆ. ಕವನದ ಪ್ರಯತ್ನ ಚೆನ್ನಾಗಿದೆ[ಮೊಬೈಲು ಫೋನು ಬಳಸಿ].
ಆಹಾಂ! ನನ್ನ ಬ್ಲಾಗಿನಲ್ಲಿ ಮತ್ತೆ ಹೊಸ ಟೋಪಿಗಳು ಬಂದಿವೆ. ಬನ್ನಿ ಟೋಪಿ ಹಾಕಿಸಿಕೊಳ್ಳಲು !
ಅಂದಹಾಗೆ ನನ್ನ ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ಹಿರಿಯಜ್ಜ ಬನ್ನಿ ಮಾತಾಡಿಸಿ !
Kangal padaamal kaigal thodaamal kaathal varuvathillai..
ಒಮ್ಮೆ ಮಾತನಾಡಿಬಿಡಬಾರದೇ...
ನಿಮ್ಮ ಕರೆಗೆ ದ್ವನಿ ಕೂಡಿಸಬಾರದೇ..
ಇನ್ನು ಸಾಕುಮಾಡಿ ವಿಷಾದಗೀತೆ
ಬರಬಹುದು ನಿಮ್ಮ ಒಲವ ಕವಿತೆ..
ನೋವು, ವಿಷಾದಗಳು ಕವನಗಳಾದಾಗಲೇ ಮನಸ್ಸಿಗೆ ಅಪ್ಯಾಯಮಾನವಾಗಿ ಬಿಡೋದು. ಗುಡ್!
-ಚಿತ್ರಾ
ಮೊಬೈಲ್ ಸೆಟ್ ಬದಲಾಯಿಸಿ ನೋಡಿ.
ಬೇಗ ಬರಲಿ ನೀವು ನಿರೀಕ್ಷಿಸುತ್ತಿರುವ ಕರೆ..
ಆ ಕಡೆ ಕರೆ ಮಾಡದೆ ಇರುವುದಕ್ಕೆ ಎನು ಕಾರಣವಿದೆಯೋ ಎನೋ..
ಕವನ ಕಾಡಿತು.. ಇಷ್ಟವಾಯಿತು..
ಶಿವು ಕೆ,
ಧನ್ಯವಾದಗಳು..ಮೆಚ್ಚಿಕೊಂಡದ್ದಕ್ಕೆ
ಮಂಜು,
ಇದೇನು ತಮಿಳು ಭಾಷಾಂತರವೇ
ಮಾಂಬಾಡಿಮಾಮ,
ವಿಷಾದಗೀತೆಯೇನಲ್ಲ, ಮನಸ್ಸಿಗೆ ತೋಚಿದ್ದು ಗೀಚಿದ್ದಷ್ಟೇ :)
ಚಿತ್ರಾ,
ನೀವು ಹೇಳಿದ್ದು ಒಪ್ಪತಕ್ಕ ಮಾತು
ಸುನಾಥ ಸರ್,
:) :) :)
ಶಿವ,
ಇದೇನು ಅಪರೂಪ ದರ್ಶನ !
ತನ್ಹಾಯಿ,
ವಂದನೆಗಳು
Post a Comment