ಒಲವಿನ ಹೂಬಾಣ
ಮನದ ಕೋಣೆಯಲ್ಲಿ
ಅದೇನೋ ತಲ್ಲಣ
ಭಾವನೆಗಳ ಪೂರಕೆ
ಎದೆಯಿಡೀ ತತ್ತರ
ಕಂಗಳಲಿ ಇಣುಕೋ ಪ್ರಶ್ನೆಗೆ
ಬೇಕು ನಿನ್ನ ಉತ್ತರ
ಅದೇನೋ ಹೇಳಲಾರದ
ಅವ್ಯಕ್ತ ವೇದನೆ
ಹೇಳಲೇ ಬೇಕಿಲ್ಲ ಇರಲಿ
ಹಾಗೆ ಸುಮ್ಮನೆ !
ಪ್ರತಿ ಮಾತಿಗೂ ಹುಟ್ಟುತಾವ
ಅರ್ಥ ನೂರಾರು
ಮನದ ಪುಟಪುಟಗಳಲ್ಲು
ಕವನಗಳ ಬೇರು
ಬಿಸಿಲೆ ಸವಿಯು, ಮಳೆಯ ಖುಷಿಯು
ಮಾಗಿ ಚಳಿಯು ಚುಂಬಕ
ಮಾವಿನೆಲೆಯು ಹುಲ್ಲಗರಿಯು
ತಾನೆ ಅದೆಷ್ಟು ಮೋಹಕ
ಪ್ರೀತಿ ಹುಟ್ಟಿ, ಸ್ನೇಹ ಬೆಳೆಯಲ್
ಎನಿತು ಸೊಗಸು ಜೀವನ
ಮುನಿಸಿ ರಮಿಸೋ
ಆಟದಲ್ಲಿ ಪುಟಿಯುತಿದೆ ಹೃನ್ಮನ!
5 comments:
ವೇಣು ಸಾರ್,
ವಲವ ಹೂಬಾಣ ಕವಿತೆ ಚೆನ್ನಾಗಿದೆ. ಮನದಾಳದ ಪ್ರೀತಿಗೆ ಬಿಸಿಲೆ ಸವಿಯು, ಮಳೆಯ ಖುಷಿಯು
ಮಾಗಿ ಚಳಿಯ ಚುಂಬಕ....
ಸಾಲು ಬಲು ಇಷ್ಟವಾದವು...
ಸುಂದರ ಕವನ. ಚಿತ್ರವೂ ಚೆನ್ನಾಗಿದೆ.
ಹೃದ್ಯವಾದ ಕವನ.
ವೇಣು ವಿನೋದ್ ಅವರೆ...
ಒಂದೊಳ್ಳೆಯ ಚಲನ ಚಿತ್ರ ಗೀತೆಯ ಸಾಲುಗಳಂತಿವೆ,
ಭಾವ ತುಂಬಿ ಬರೆದಿದ್ದೀರಿ.
ಬರೆಯುತ್ತಿರಿ.
ಓಹೋ... ಹಿಂಗೆ ವಿಷ್ಯ..! ;-)
- ವೈಶಾಲಿ
Post a Comment