ಈ ಹಕ್ಕಿ ಸುಮ್ಮನೆ ಅಂಗೈಯೊಳಗೆ ಬರುವುದು ಸಾಧ್ಯವೇ ಇಲ್ಲ.
ನಮ್ಮ ಹೂತೋಟಗಳಲ್ಲಿನ ಹೂವುಗಳ ಸುತ್ತ ಸುತ್ತುತ್ತಾ ಇರುವ ಈ ಪುಟ್ಟ ಪುಟ್ಟ ಹಕ್ಕಿಗಳಲ್ಲಿ ಸುಮಾರು ೧೩೨ ಥರದವು ಇವೆಯಂತೆ!
Nectariniidae ಕುಟುಂಬಕ್ಕೆ ಸೇರಿದ ಈ ಹಕ್ಕಿಯ ಜೈವಿಕ ಹೆಸರು Nectarinia jugularis. ಹಳದಿ ಎದೆಯ ಸೂರ್ಯಕ್ಕಿ ಅಥವಾ ಆಲಿವ್ ಬೆನ್ನಿನ ಸೂರ್ಯಕ್ಕಿ(sunbird) ಎನ್ನುವುದು ಸಾಮಾನ್ಯ ಪದನಾಮ.
Nectariniidae ಕುಟುಂಬದಲ್ಲಿ ಸೂರ್ಯಕ್ಕಿಗಳಲ್ಲದೆ ಸ್ಪೈಡರ್ಹಂಟರ್ಗಳು, ಫ್ಲವರ್ಪೆಕರ್ಗಳೂ ಬರುತ್ತವೆ.
ಮೊನ್ನೆ ಮನೆಯಲ್ಲಿ ಕೂತಿದ್ದಾಗ ಅಂಗಳಕ್ಕೆ ಪಟಾರನೆ ಬಿದ್ದುಬಿಟ್ಟ ಈ ಹಕ್ಕಿಗೆ ಏನಾಗಿತ್ತೋ ತಿಳಿಯದು. ಕಾಗೆ ಅಟ್ಟಿಸಿಕೊಂಡು ಬಂತೇ ಅಥವಾ ಬಿಸಿಲ ಧಗೆಗೆ ತಲೆ ತಿರುಗಿತ್ತೇ ಗೊತ್ತಾಗಲಿಲ್ಲ. ಬಿದ್ದು ಗರಬಡಿದಂತೆ ಕೂತಿದ್ದ ಈ ಹಕ್ಕಿಯನ್ನು ಗೆಳತಿ ರಶ್ಮಿ ಎತ್ತಿಕೊಂಡು ನೇವರಿಸಿ, ಅದರ ಮೈಮೇಲೆ ತಂಪು ನೀರು ಎರಚಿದಾಗ ಯಾವುದೇ ದಾಕ್ಷಿಣ್ಯ ತೋರಿಸದೆ ಕೊಕ್ಕು ತೆರೆಯುತ್ತಾ ಕುಡಿಯಿತು ಈ ಸೂರ್ಯಕ್ಕಿ!
ಒಂದಷ್ಟು ಹೊತ್ತು ತನ್ನನ್ನು ಆರೈಕೆ ಮಾಡುತ್ತಿದ್ದವರನ್ನೇ ಕೃತಜ್ಞತಾಪೂರ್ವಕ ನೋಡುತ್ತಿತ್ತು. ಈ ಹಕ್ಕಿಯನ್ನು ಇನ್ನು ಬದುಕಿಸೋದು ಕಷ್ಟವೇನೋ ಅನ್ನಿಸುತ್ತಿತ್ತು ನನಗೆ, ಯಾಕೆಂದರೆ ಹಕ್ಕಿ ಅಷ್ಟು ಕರುಣಾಜನಕವಾಗಿ ಕಾಣಿಸುತ್ತಿತ್ತು.
ಗೆಳತಿಯ ಕೈಲಿ ಭದ್ರವಾಗಿ ಕೂತಿದ್ದ ಹಕ್ಕಿಯ ಒಂದೆರಡು ಫೋಟೋ ಕ್ಲಿಕ್ಕಿಸಿದೆ. ಅಲ್ಲಿಂದ ಹಕ್ಕಿಯನ್ನೆತ್ತಿ ಒಂದು ಮರದ ಹತ್ತಿರ ಬಿಡೋಣ, ಅದರ ತಾಯಿಯಾದರೂ ಬಂದು ಕರೆದೊಯ್ಯಲೂ ಬಹುದು ಎಂದು ಭಾವಿಸಿ ನಾವು ಅದನ್ನು ಮನೆಯೆದುರಿನ ತೆಂಗಿನ ಮರದ ಹತ್ತಿರ ತರುವಾಗಲೇ ಹಕ್ಕಿ ಪುರೃನೆ ಹಾರಿಹೋಗಿ ಗುಲಾಬಿ ಗಿಡದಲ್ಲಿ ಕೂತಿತು!
ಒಂದೆರಡು ನಿಮಿಷ ಕೂತಲ್ಲೇ ರೆಕ್ಕೆ ಬಡಿಯುತ್ತಾ ತನ್ನ ಸಾಮರ್ಥ್ಯ ಪರೀಕ್ಷಿಸಿಕೊಂಡು ಬಳಿಕ ಹಾರಿ ಮಾಯವಾಯಿತು!
12 comments:
‘ಅಂಗೈಯಲ್ಲಿಟ್ಟುಕೊಂಡು ಕಾಪಾಡಿದರು’ ಎನ್ನತ್ತಾರಲ್ಲ,ಆ ಮಾತನ್ನು ನಿಜ ಮಾಡಿದಿರಿ, ಹಕ್ಕಿ ತುಂಬ ಸುಂದರವಾಗಿದೆ. ಅದನ್ನು ರಕ್ಷಿಸಿ, ನಮಗೆ ತೋರಿಸಿ, ವಿವರ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.
ಚೆಂದದ ಪುಟ್ಟ ಹಕ್ಕಿ . ದಿನಾ ನನ್ನ ಪಾಟ್ ಗಳಲ್ಲಿರುವು ಹೂವುಗಳಿಗೆ ಒಮ್ಮೆ ಬಂದು ಕಿಚ್ ಕಿಚ್ ಸದ್ದು ಮಾಡುತ್ತವೆ . ಅದನ್ನೇ ಕಾಯುವ ನನ್ನ ಹೆಜ್ಜೆ ಸಪ್ಪಳ ಕೇಳಿದಾಕ್ಷಣ ಮಕರಂದ ಹೀರುವುದನ್ನೂ ಬಿಟ್ಟು ಹಾರಿಹೋಗುತ್ತವೆ . ತುಂಬ ಸಂಕೋಚಸ್ವಭಾವದವಿವು.
Soooo Cute!
ವೆರಿಗುಡ್, ಸೂರಾಕ್ಕಿ ನಿಮ್ಮ ಗೆಳತಿಯ ಕೈಯಲ್ಲಿ. ನಾನು ಇದರ ಫೋಟೊ ತೆಗೆದಿದ್ದೇನೆ. ನಿಮಗೆ ಇಷ್ಟು ಸುಲಭವಾಗಿ ಸಿಕ್ಕಿದು ನಿಮ್ಮ ಅದೃಷ್ಟ.
tumbaa oLLeya kelasa maaDidiri sir, eegeega hakki sankulave naashavaaguttide..... sundara photo.....
Entha sundaravaada anbhava... Oodi bhala kushiyaathu.
ವೇಣು ಸರ್
ಸುಂದರ ಫೋಟೋದೊಂದಿಗೆ ಬರಹ ಕೂಡಾ
ಸುಂದರ ಅನುಭವ :) ಸೂರಕ್ಕಿಗಳು ನೋಡಲೇ ಚಂದ... ಅದನ್ನು ಮುಟ್ಟುವ ಹಾಗು ಹತ್ತಿರದಿಂದ ನೋಡುವ ಅವಕಾಶ ನಿಮಗೆ ಖುಷಿ ತಂದಿರಬೇಕು :)
ವೇಣು ಅವರೆ,
ಗೆಳತಿ ರಶ್ಮಿಯವರ ಅಂಗೈಯಲ್ಲಿ ಬೆಚ್ಚಗೆ ಕುಳಿತಿರುವ ಸೂರ್ಯಹಕ್ಕಿಯನ್ನು ನೋಡಿ ಸ್ವಲ್ಪ ಮತ್ಸರವಾಯ್ತು! :) ನಾನು ಈವರೆಗೂ ಯಾವ ಹಕ್ಕಿಯನ್ನೂ ಕೈಯಲ್ಲಿ ಮುಟ್ಟಿಲ್ಲ. ಅವುಗಳನ್ನು ಮೃದುವಾಗಿ ನೇವಿರಸಬೇಕೆಂಬ ಆಶಯ ಬೆಟ್ಟದಷ್ಟಿದೆ. ಎಷ್ಟು ಮುದ್ದಾಗಿದೆ ನೋಡಲು! ಅದನ್ನು ನೇವರಿಸಿದ ಕೈಗಳೇ ಧನ್ಯ. ನೀವಿಬ್ಬರೂ ಆ ಪುಟಾಣಿಗೆ ನೆರವನ್ನಿತ್ತು ತುಂಬಾ ಉತ್ತಮ ಕೆಲಸ ಮಾಡಿದ್ದೀರಿ. ತುಂಬಾ ಧನ್ಯವಾದಗಳು.
ಹಕ್ಕಿಯ ಆರೈಕೆ ಮಾಡೋ ಜೊತೆಗೆ ಅದರ ಮಾಹಿತಿ ನೀಡಿದ್ದು ಒಳ್ಳೇದಾಯ್ತು. ಹೊಸ ವಿಚಾರ ತಿಳಿಸಿದ್ದಕ್ಕೆ ಥ್ಯಾಂಕ್ಸ್.
ಸುನಾಥ್, ನಿಮ್ಮ ಪ್ರತಿಕ್ರಿಯೆಯಿಂದ ಖುಷಿಯಾಯ್ತು..ವಂದನೆ
ಶಿವು, ಹೌದು, ಅದು ಅದೃಷ್ಟ ಅಷ್ಟೇ
ದಿನಕರ,ಮಿಂಚು, ಗುರು ಥ್ಯಾಂಕ್ಸ್
ಕಲ್ಮನೆ, ನಿಜಕ್ಕೂ ಸೂರಕ್ಕಿಗಳು ತುಂಬಾನೇ ಚೆಂದ
ತೇಜಸ್ವಿನಿ,...ವಂದನೆ
ಮಾಂಬಾಡಿಯವರಿಗೂ ಥ್ಯಾಂಕ್ಸ್
ಸುಮ, ಹೌದು ಹೂವುಗಳಿಗೆಮುತ್ತುತ್ತಲೇ ಇರುವ ಹಕ್ಕಿಗಳಿವು...
ಕೆನೆಕಾಫಿ ವೈಶಾಲಿಯವರೇ ಥ್ಯಾಂಕ್ಯು
Post a Comment