20.3.11

ಭಾನುವಾರದ ಹೊತ್ತು


ಭಾನುವಾರವೆಂದರೆ ಹಾಗೆ
ಒಂದು ಬೊಗಸೆ
ಅಮೃತವನ್ನು
ಹಿಡಿದು ನಿಂತಂತೆ...
ಥಟ್ಟನೆ ಸೋರಿ ಹೋಗಿ ಬಿಡುತ್ತದೆ
ಏನೇನೋ ಮಾಡುವ
ಯೋಚನೆ-ಯೋಜನೆಗಳು
ಸರ್ಕಾರದ ಕಾರ್ಯಕ್ರಮದಂತೆ
ಶೈಶವ ಬಿಟ್ಟೇಳವು!


ಕಣ್ಣಲ್ಲೇ ಅಂಟಿಕೊಂಡ ನಿದ್ದೆ
ಕಪ್ಪಲ್ಲೇ ಆರಿದ ಕಾಫಿ
ಮುಂದಕ್ಕೋಡದ ಕಾದಂಬರಿ
ಹಾರ್ಡ್ ಡಿಸ್ಕಲ್ಲೇ ಉಳಿದ
ಹೊಸ ಸಿನಿಮಾ
ಅಳಿದುಳಿದ ಮೊನ್ನೆಯ ಸಾಂಬಾರು
ಫ್ರಿಜ್ಜಲ್ಲಿದೆ ಕೆಎಫ್‌ ಬೀರು
ಉಫ್‌..
ಈ ಭಾನುವಾರಕ್ಕೆ
ಎಷ್ಟೊಂದು ಷೆಡ್ಯೂಲುಗಳು!


ಹಿಂದಿನ ವಾರದ ಧೂಳು
ಕೊಡವಿದಾಗ
ಹಳೆಯ ದಿನಪತ್ರಿಕೆಗಳ
ಪೇರಿಸಿದಾಗ
ಸಂಗಾತಿಯ ಗಂಟಲಿಂದ
ಹೊರಹೊಮ್ಮುವ ಕೆಮ್ಮಿಗೆ
ನಾನಾ ಅರ್ಥ!


ತಡವಾಗೆದ್ದು,
ಏನೋ ತಿಂದು
ಮಧ್ಯಾಹ್ನದ ಊಟ ಸಂಜೆ
ಮಾಡಿದಾಗಲೇ
ಮರುದಿನದ ಕೆಲಸಗಳೆಲ್ಲಾ
ಧುತ್ತನೆ ಎದುರು
ಬಂದು  ಕಣ್ಣು ಮಂಜಾದಾಗ
ಅನಾಥಭಾವ
ಛೇ..
ಹಿಡಿಯಷ್ಟು ಭಾನುವಾರ
ಉಳಿಸಿಕೊಳ್ಳಲಾಗಲಿಲ್ಲ!


10 comments:

Unknown said...

wow!!!!! dis sunday was same 2 same 4 me dude!!!! u must a spy also!!! gops

ತೇಜಸ್ವಿನಿ ಹೆಗಡೆ said...

ಹೆಚ್ಚಿವರ ಹೆಚ್ಚಿನ ಭಾನುವಾರದ ಗತಿಯೂ ಇಷ್ಟೇ ಆಗಿರುತ್ತದೆ! ಇಷ್ಟವಾಯ್ತು.... :)

sunaath said...

ಭಾನುವಾರದ ಕತೆಯನ್ನ ಸರಿಯಾಗಿ ಹಿಡಿದಿಟ್ಟಿದ್ದೀರಿ!

ವನಿತಾ / Vanitha said...

wow..!!!!!!! ishta aaythu :)

ಮೌನರಾಗ said...

ಸೊಗಸಾದ ಕವಿತೆ..
"ಭಾನುವಾರವೆಂದರೆ ಹಾಗೆ
ಒಂದು ಬೊಗಸೆ
ಅಮೃತವನ್ನು
ಹಿಡಿದು ನಿಂತಂತೆ...
ಥಟ್ಟನೆ ಸೋರಿ ಹೋಗಿ ಬಿಡುತ್ತದೆ"
ಸಾಲುಗಳು ಬಾಳಾ ಇಷ್ಟವಾಯಿತು.. hmmm...ಭಾನುವಾರವೆಂದರೆ ಹಾಗೆ..ನನಗೂ ಹಾಗೆ ಅನಿಸುತ್ತದೆ...

shivu.k said...

ನಿಜಕ್ಕೂ ಸತ್ಯ..

ಹಿಡಿಯಷ್ಟು ಭಾನುವಾರವನ್ನು ಉಳಿಸಿಕೊಳ್ಳಲಾಗಲಿಲ್ಲವೆನ್ನುವುದು..ತುಂಬಾ ಚೆನ್ನಾಗಿದೆ..ಕವನ..

ದಿನಕರ ಮೊಗೇರ said...

sogasaada bhaanuvaadashTe sogasaada kavana...

Unknown said...

hottu mugida bhanu vaarada bhaavane chennagi moodi bandide

shravana said...

Too good Sir.. very true indeed :)

Hariprasada. A said...

bhaanuvaarada hottu,.. tumba arta purnavaagide.. and busy life ge hechchu suit aagutte,, adannu aksharagalli, saalugalalli tumba chenda hididittiddiri.

Related Posts Plugin for WordPress, Blogger...