ಮಳೆಗಾಲದ ಸಂಜೆಯಲ್ಲಿ
ಕಿಟಿಕಿ ತೆರೆದು ಕುಳಿತಿದ್ದರೆ
ಮನದ ಕೋಣೆಯಲ್ಲಿ
ನೆನಪುಗಳು ಚಳಿಯ
ಬಾಧೆಯಿಂದ ನರಳುತ್ತವೆ
ಮನಸ್ಸು ಹೇಳಿದರೂ
ಕೇಳದೆ ಹಿಂದಕ್ಕೋಡುತ್ತದೆ
ಹಿಡಿತ ಕಳೆದುಕೊಂಡು
ಚೆಲ್ಲಾಪಿಲ್ಲಿಯಾದ
ಭಾವಗಳು ಕಣ್ಣಂಚಿಂದ
ಹೊರಬಂದು
ಅನಾಥವಾಗುತ್ತವೆ
ಕಿಟಿಕಿಯ ಹೊರಗೆ
ಕನಿಕರವಿಲ್ಲದೆ ಸುರಿಯುವ
ಹನಿಗಳು ಹಳ್ಳ ಸೇರಲು
ಹವಣಿಸುತ್ತಿವೆ
ಮನದ ಭಾವಗಳು
ಮುಕ್ತವಾಗಲು ತಪ್ತ
ಮಳೆ ಸುರಿಯುತ್ತಲೇ
ಇದೆ ಇನ್ನೂ..
ಕುಳಿರುಗಾಳಿ, ಮಿಂಚು
ಸಿಡಿಲುಗಳಿಗೆ ಬೆದರಿದ
ಬೀದಿ ದೀಪಗಳೂ ನಂದಿವೆ
ಕೆಳಗೆ ತೊಯ್ದ ಮಿಡತೆಗಳ
ಮೃತದೇಹಗಳು..
ಮನದ ಕಿಂಡಿಯೊಳಗೆ
ಈಗ ಎಲ್ಲವೂ ಖಾಲಿ
-------------------------
pic courtesy: whiteeecrow.wordpress.com
6 comments:
ee maLEye haage kaNri..bhaavagaLa baDidebbisutte..
ಚೆನ್ನಾಗಿವೆ ಸಾಲುಗಳು ವೇಣು, ಮಳೆಯ ಹನಿಮುತ್ತುಗಳ ಹಾಗೆ...
ಚೆನ್ನಾಗಿವೆ ಸಾಲುಗಳು ವೇಣು, ಮಳೆಯ ಹನಿಮುತ್ತುಗಳ ಹಾಗೆ...
Venuji
sundara saalugalu :)
good one
ಧನ್ಯವಾದಗಳು ವಿಜಯ್, ರಾಧಿಕಾ, ಗುರು, ರಶ್ಮಿಗೆ...
Post a Comment