ಹಾರುವ
ರಾಕೆಟ್ಟುಗಳೆಲ್ಲ
ಲಂಕೆ ಸುಟ್ಟಂತೆ
ಒಂದೊಂದು ಮತಾಪಿನಲ್ಲೂ
ಒಬ್ಬೊಬ್ಬ ರಕ್ಕಸ
ಉರಿದುಹೋದಂತೆ
ಬಿದ್ದಿದೆ ದೀಪಾವಳಿಯ ರಾತ್ರಿ ಕನಸು
ವೇದಿಕೆಯಲ್ಲಿ
ಅಟ್ಟಹಾಸ ಕೊಡುತ್ತಿದ್ದಾರೆ
ರಕ್ಕಸ ವೇಷಧಾರಿಗಳು,
ಅಕ್ಕಟಕಟಾ!
ಗಹಗಹಿಕೆ
ಮರೆಯಾಗಿ ಸಾಲು ಸಾಲಾಗಿ
ಕತ್ತಲಮರೆಗೆ ಹೋಗುತ್ತಿದ್ದಾರೆ
ಕಾಣಾ.
ನರಕಾಸುರನ ವಧೆಯಾಗಿದೆ
ಸುದರ್ಶನ ಚಕ್ರವಿನ್ನೂ ಸುತ್ತುತ್ತಲೇ
ಇದೆ ಹಲವು ತಲೆಗಳ ಸುತ್ತ!
ದಾನಶೂರನಾದರೂ
ಕಿತಾಪತಿ ಮಾಡಿದ
ಬಲಿ ಚಕ್ರವರ್ತಿಯನ್ನು
ವಾಮನ ಮೂರನೇ ಹೆಜ್ಜೆಗೆ
ಪಾತಾಳಕ್ಕೆ ತಳ್ಳಿದ್ದಾಗಿದೆ!
ಬಲಿ ಮತ್ತೆ
ಪ್ರಜೆಗಳನ್ನು ನೋಡುವುದಕ್ಕೆ
ಉತ್ಸುಕನಾಗಿದ್ದಾನೆ
ಈ ದೀಪಾವಳಿಯಲ್ಲಿ
ಆದರೆ ಜನರೇ
ಬಲಿಯನ್ನು ಮರೆತಿದ್ದಾರೆ
ದೀಪಾವಳಿಯ ಸಂಭ್ರಮದಲ್ಲಿ
ಬೆರೆತುಹೋಗಿದ್ದಾರೆ
ವೇದಿಕೆಯ ಹಿಂದೆ
ನರಕಾಸುರ, ಬಲಿ
ಎಲ್ಲರೂ ಕುಳಿತು ಅತ್ತರೂ
ಪಟಾಕಿಯ ಸದ್ದಿನಲ್ಲಿ
ಮರೆಯಾಗಿದೆ..
ದೀಪಾವಳಿಯ ರಾತ್ರಿ ಕನಸು ಬಿದ್ದಿದೆ!
(ಎಲ್ಲರಿಗೂ ಈ ದೀಪಾವಳಿ ಸಂಭ್ರಮ, ಜೀವನೋಲ್ಲಾಸ ತರಲಿ ಎಂದು ಆಶಿಸುತ್ತೇನೆ)
ಚಿತ್ರಕೃಪೆ: http://festivalspictures.blogspot.com
2 comments:
ಸುಂದರ ಕವನ.ದೀಪಾವಳಿ ಹಬ್ಬದ ಶುಭಾಶಯಗಳು.
Gud one...ದೀಪಾವಳಿಯ ಶುಭಾಶಯಗಳು..
Post a Comment