ಹೀಗೊಂದು ಅಪಘಾತದ ಕಥೆ
ಅದು ಹಿಂಗಾರು ಮಳೆಯ ರಾತ್ರಿ...
ಪಿರಿಪಿರಿ ಮಳೆಯಲ್ಲಿ ಕಪ್ಪು ಹೆದ್ದಾರಿ ಮಿರಿಮಿರಿ ಹೊಳೆಯುತ್ತದೆ.
ಆಗೊಮ್ಮೆ ಈಗೊಮ್ಮೆ ರಾಜಾರೋಷವಾಗಿ ಟ್ರಕ್‌ಗಳು, ಬಸ್‌ಗಳು ಹರಿದಾಡುತ್ತವೆ.
ಅಲ್ಲೊಂದು ಚಿಕ್ಕ ದೃಶ್ಯ. ವ್ಯಕ್ತಿಯೊಬ್ಬನ ದೇಹ ಮಕಾಡೆ ಬಿದ್ದಿದೆ, ರಕ್ತ ಕೋಡಿ ಹರಿಯುತ್ತಿದೆ. ಒಂದೆರಡು ವಾಹನಗಳು ರಸ್ತೆ ಪಕ್ಕ ನಿಂತಿವೆ ಹತ್ತಾರು ಮಂದಿ ದೇಹದ ಸುತ್ತ ಸೇರಿದ್ದಾರೆ.
ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿರಬಹುದು. ಪೊಲೀಸ್ ಜೀಪ್ ಕೂಡಾ ಅದೋ ಬಂದಿದೆ.
‘ಅದು ಹೋಗಿದೆ, ಅಲ್ಲಾಡ್ತಾ ಇಲ್ಲ..’
‘ಯಾರೋ ಏನೋ ಪಾಪ, ಲಾರಿ ಹೊಡ್ಕೊಂಡ್ ಹೋಗಿರ‍್ಬೇಕು’
ಹೀಗೆ ಸೇರಿದವರಲ್ಲೇ ಮಾತು-ಕತೆ.
ಪೊಲೀಸರು ವ್ಯಕ್ತಿಯ ಜೇಬು ತಡಕಾಡುತ್ತಾರೆ, ಗುರುತು ಹಿಡಿಯಲು ಯತ್ನಿಸಿ ಸೋತಿದ್ದಾರೆ, ಅವನ ಕಿಸೆಯಲ್ಲಿ ಸಿಕ್ಕಿದ ಮೊಬೈಲಲ್ಲೇ ಕೊನೆಯ ಕರೆ ಬಂದ ವ್ಯಕ್ತಿಗೂ ಕರೆ ಮಾಡಿದ್ದಾರೆ, ಆ ಮೊಬೈಲ್ ಈಗ ವ್ಯಾಪ್ತಿ ಪ್ರದೇಶದ ಹೊರಗೆಲ್ಲೋ ಇದೆ.
ನಿಶ್ಚಲನಾಗಿ ಬಿದ್ದ ವ್ಯಕ್ತಿಯ ಕೈನಲ್ಲಿ ವಾಚ್ ಸಹಜ ವೇಗದಲ್ಲಿ ಓಡುತ್ತಲೇ ಇದೆ, ಆದರೆ ಎದೆಬಡಿತವಲ್ಲ....
ಕೊನೆಗೂ ವ್ಯಕ್ತಿಯನ್ನು ಜೀಪೊಂದಕ್ಕೆ ಹಾಕಿ ಆಸ್ಪತ್ರೆಗೆ ಕಳುಹಿಸಿದ್ದಾರೆ
ಏನಾಗಿರಬಹುದು? ನಾಳೆ ಪತ್ರಿಕೆ ಓದಬೇಕು!
1 comment:
heart touching..
Post a Comment