8.7.07

ಎರಡು ಪಲುಕುಗಳು

ಜಾಹೀರಾತು

ಅವಳ
ರಾತ್ರಿಗಳಿಗೆ
ಬಣ್ಣ ಮೆತ್ತುವ
ಕನಸುಗಳನ್ನು
ಕಾವಲು
ಕಾಯುವುದಕ್ಕೊಬ್ಬ
ಕಾವಲುಗಾರ
ಬೇಕಾಗಿದ್ದಾನೆ!ಸವಾಲು

ಆ ಹುಡುಗಿಯ
ಕೂದಲ ಮೇಲೆ
ಮಿರಿಮಿರಿ
ಮಿರುಗುವ
ನೀರಹನಿಯಲ್ಲಿ
ಯಾರ್ಯಾರದ್ದೋ
ಪ್ರತಿಬಿಂಬಗಳು
ಅದರಲ್ಲಿ
ನನ್ನನ್ನು
ಹುಡುಕಿಕೊಡುವವರು
ಬೇಕಾಗಿದ್ದಾರೆ!

12 comments:

SHREE said...

ಯಾರ್ಯಾರದೋ ಪ್ರತಿಬಿಂಬಗಳ ನಡುವೆ ನಿಮ್ಮ ಪ್ರತಿಬಿಂಬ ಹುಡುಕಹೊರಟು ಯಾರದೋ ಬಿಂಬವನ್ನು ನಿಮ್ಮ ಬಿಂಬವೆಂದುಕೊಂಡೀರಾ, ಹುಷಾರ್!!! :-)

VENU VINOD said...

ಅದಕ್ಕೇ ನಾನು ಹುಡುಕೋದಿಲ್ಲ, ನಿಮ್ಮಂಥವರ ಸಹಾಯ ತಗೋತೇನೆ ಹ ಹ್ಹ ಹ್ಹಾ...

ರಾಜೇಶ್ ನಾಯ್ಕ said...

ರೀ ವೇಣು,

ಆ ಜಾಹೀರಾತನ್ನು ಕ.ಪ್ರ.ದಲ್ಲಿ ಹಾಕುವ ಇರಾದೆ ಇದೆಯಾ?

ನಿಮ್ಮ ಪ್ರತಿಬಿಂಬವನ್ನು ನಾನು ಹುಡುಕಿ ಕೊಡುತ್ತೇನೆ...ನಂದು ನೀವು ಹುಡುಕುವುದಾದರೆ...ಹ್ಹೆ ಹ್ಹೆ.

ಸುಶ್ರುತ ದೊಡ್ಡೇರಿ said...

ಆ ಕನಸುಗಳಲ್ಲಿರುವುವರು ನೀವೇ ಅಂದಮೇಲೆ ಕಾವಲುಗಾರನ ಅವಶ್ಯಕತೆ ಏನ್ರೀ ಇದೆ..? :)

ಪ್ರವೀಣ್ ಮಾವಿನಸರ said...

ಬ್ಲಾಗ್ ಲೇಔಟ್ ಚೆನ್ನಾಗಿದೆ.ಕವನಗಳು ಇನ್ನೂ ಚೆನ್ನಾಗಿವೆ...

VENU VINOD said...

ರಾಜೇಶ್,
ಕ.ಪ್ರದಲ್ಲಿ? ಖಂಡಿತಾ ಇಲ್ಲಪ್ಪ, ನನ್ನನ್ನು ಮನೆಗೆ ಕಳಿಸೋ ಐಡಿಯಾನ ನಿಮ್ಮದು? ;)

ಸುಶ್ರುತ,
ಕನಸುಗಳಲ್ಲಿ ನಾನೇ ಇದ್ದೇನೆ ಅನ್ನೋ ಖಾತರಿಯೇನೂ ಇಲ್ಲ :)ಆಗಾಗ ಬರುತ್ತಿರಿ

ಪ್ರವೀಣ್,
ಮೆಚ್ಚಿದ್ದಕ್ಕೆ ಧನ್ಯವಾದ

ಸುಸಂಕೃತ said...

ನಿಮ್ಮ ಎರಡೂ ಪಲುಕುಗಳನ್ನು ಮೆಲುಕು ಹಾಕುತ್ತಾ ತೋಚಿದ್ದನ್ನ ಗೀಚುವೆ!

ಕಾವಲು ಕಾದೆ
ಇರುಳಿಡೀ
ಕನಸುಗಳ ಕಣ್ಣಲ್ಲಿ ಕಣ್ಣಿಟ್ಟು!

ಮುಂಜಾವಿನಲ್ಲಿ ನನಗೆ ನಿದ್ದೆ ಮಂಪರು
ಹುಡುಗಿ ಎದ್ದು ಕೂದಲು ತೊಳೆವಾಗ
ಕನಸುಗಳೂ ನೀರೊಡನೆ ಕೊಚ್ಚಿ ಹೋದವು

ಈಗ, ಬಿಂಬವನರಸುವ ಕೆಲಸ
ಕೂದಲಿಗಂಟಿದ ನೀರ ಹನಿಯಲ್ಲಿ
ಸವಾಲನೆದುರಿಸಿದರೆ ಸಂಭಾವನೆಯುಂಟೋ!?

minugutaare said...

VERY GOOD POEMS vENU. kEEP IT UP.
I think you are in search of something.

Soni said...

Venu hegidhira? yenta samachara? tumba dinagalu advu........ yaranna hodakta idhira? athva nav hudki kodbeka?

VENU VINOD said...

ಸುಸಂಸ್ಕೃತ,
ಪಲುಕುಗಳನ್ನು ನೀವು ಮೆಲುಕು ಹಾಕುತ್ತಾ ನೇಯ್ದ ಕವನ ಇಷ್ಟ ಆಯ್ತು. ಸಂಭಾವನೆ ಯಾಕೆ? ;)

ಮಿನುಗುತಾರೆ, ಧನ್ಯವಾದಗಳು. ಇಲ್ಲ ಸದ್ಯಕ್ಕೆ ಏನನ್ನೂ ಹುಡುಕುತ್ತಿಲ್ಲ. ಅನುಮಾನ ನಿಮಗ್ಯಾಕೆ ಬಂತು ಎಂದು ಕೇಳಬಹುದೇ? :)

ಸೋನಿ, ಹೌದು. ನೀವು ಬ್ಲಾಗ್ ಬಗ್ಗೆ ಆಸಕ್ತಿ ಕಳಕೊಂಡಂತಿದೆ . ಯಾಕೆ? ಹುಡುಕುವಾಗ ಖಂಡಿತ ಹೇಳ್ತೀನಿ :)

ಮನಸ್ವಿನಿ said...

ಹುಡುಕಿಕೊಡುವವರು ಸಿಕ್ಕಿದ್ರಾ? ;)

VENU VINOD said...

ಮನಸ್ವಿನಿ,
ಇನ್ನೂ ಸಿಕ್ಕಿಲ್ಲ. ಎಲ್ಲಾ ಕಿಚಾಯಿಸೋರೇ :(

Related Posts Plugin for WordPress, Blogger...