ಮನೆಯೊಳಗೆ,
ಹಾಗು
ಬಾಗಿಲಿನ ಹೊರಗೆ
ಕಿವಿಗಡಚಿಕ್ಕುವ ಶಬ್ದಗಳು
ದೇವಸ್ಥಾನದ
ಪ್ರಸಾದದ ತಟ್ಟೆಯಲ್ಲೇ
ಬಾಂಬ್
ಇಗರ್ಜಿಯಲ್ಲಿ
ಮುರಿದು ನೇತಾಡುವ ಶಿಲುಬೆ
ಸಮುದ್ರ ತಟಕ್ಕೂ
ಅಪ್ಪಳಿಸಿ ಪಾದ ತೋಯಿಸುತ್ತಿದೆ
ಸಂಕಟದ ಅಲೆ
ಮಟನ್ನು ಮಾರ್ಕೆಟ್ಟಲ್ಲಿ
ದಿನವೂ ಭರ್ಜರಿ ವ್ಯಾಪಾರ
ಕ್ಷೀಣವಾಗಿದೆ ಆಡುಗಳ ಅರಚಾಟ
ಓಡು...ಬೆಳಕಿನತ್ತ
ಕತ್ತಲ ಮರೆಯಿಂದ
ಗುಂಡು ಗುಂಡಿಗೆ
ಸೀಳಿಬಿಡಬಹುದು..
ವಿ ಚಿ ತ್ರ....
ಆದರು ಸತ್ಯ
ಹಿಂಸೆಯ ಬಾಜಾರಿನಲ್ಲಿ
ಇನ್ನೂ ಬಿಳಿ ಪಾರಿವಾಳ
ಹುಡುಕುತ್ತಾರೆ!!!
ಚಿತ್ರಕೃಪೆ: adriansvcblog.blogspot.com
10 comments:
ಹಿಂಸೆಯ ಬಾಜಾರಿನಲ್ಲಿ
ಇನ್ನೂ ಬಿಳಿ ಪಾರಿವಾಳ
ಹುಡುಕುತ್ತಾರೆ!!!
ಎಂಥಾ ವಿಪರ್ಯಾಸ !
ಕವನ ಮನೋಜ್ಞಾಅಗಿದೆ. ಪರಿಸ್ಥಿತಿಯ ತೀವ್ರತೆಯನ್ನು ಅದ್ಭುತವಾಗಿ ತಿಳಿಸುತ್ತದೆ.
wah!
ಪ್ರಸಾದದ ತಟ್ಟೆಯಲ್ಲೇ
ಬಾಂಬ್
ಮುರಿದು ನೇತಾಡುವ ಶಿಲುಬೆ..
ವಾಸ್ತವದ ವಿಚಾರವೇ ಸರಿ.
ಇದೆಲ್ಲಾ ಮುಗಿಯುವಿದು ಯಾವಾಗ?
ಕೈಯಲ್ಲಿರುವ ಪಾರಿವಾಳ ಬಿಳಿ ಬಣ್ಣದ್ದು ಅನ್ನೋದು ನಮ್ಮೆಲ್ಲರ ಮಟ್ಟಿಗೆ ಭರವಸೆ ಮಾತ್ರ...ಆದರೆ ಸತ್ಯ???
ಒಂದು ಒಳ್ಳೆಯ ಕವನ.
bili parivalave marichikeyagideyalla...
"ಹಿಂಸೆಯ ಬಾಜಾರಿನಲ್ಲಿ
ಇನ್ನೂ ಬಿಳಿ ಪಾರಿವಾಳ
ಹುಡುಕುತ್ತಾರೆ!!!"
ಕವನ ಚೆನ್ನಾಗಿದೆ..
-ಚಿತ್ರಾ
good expression
Wonderful poem!
ಹಿಂಸೆಯ ಬಾಜಾರಿನಲ್ಲಿ
ಇನ್ನೂ ಬಿಳಿ ಪಾರಿವಾಳ
ಹೌದು ನಾಳೆ ನಮ್ಮ ಮನೆ ಪಕ್ಕದ ಬೀದಿಗಳಲ್ಲಿ ಇದೇ ಹುಡುಕಾಟ ನಡೆದರೆ ಆಶ್ಚರ್ಯವಿಲ್ಲ
ಲಕ್ಷ್ಮಿ,
ನನ್ನ ಬ್ಲಾಗ್ಗೆ ಸ್ವಾಗತ...ಕವನ ನಿಮ್ಮಂತಹ ಪ್ರಾಮಾಣಿಕ ಓದುಗರನ್ನು ತಟ್ಟಿದ್ದರೆ ಧನ್ಯ.
ಮಿಥುನ್, ವಂದನೆ
ಮಾಂಬಾಡಿ,
ಗೊ..ತ್ತಿ..ಲ್ಲ !
ಕಾರ್ತಿಕ್,
ಸರಿಯಾಗಿ ಹೇಳಿದ್ದೀರಿ...
ಪ್ರಿಯಾ ಕೆರ್ವಾಶೆ,
ನನ್ನ ಬ್ಲಾಗ್ಗೆ ಸ್ವಾಗತ...ನಿಮ್ಮ ಅಪ್ಪ ತೋಟ ಮಾರ್ತಾರಂತೆ ಲೇಖನ ಬಹಳ ಮನೋಜ್ಞವಾಗಿದೆ
ಚಿತ್ರಾ, ಧನ್ಯವಾದ..
ಮೌನೇಶ್,
ಥ್ಯಾಂಕ್ಸ್...ನಿಮ್ಮ ಜಲಕ್ರೀಡೆ ಎಲ್ಲಿ ??? :)
ಸುನಾಥ್ ಸರ್,
ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಶರಣು...
ಆನೆಗುಂಡಿ,
ಈಗಾಗಲೇ ನಮ್ಮಲ್ಲ ಹುಡುಕಾಟ ಆರಂಭವಾಗಿದೆಯಲ್ಲ...
Post a Comment