ಕಗ್ಗತ್ತಲೆಯ ಹೊಡೆತಗಳಿಗೆ
ನೀನು ಹೆಗಲು
ಕೊಡುವೆ ಎಂದುಕೊಂಡೆ
ಹುಸಿಯಾಯಿತು ನಂಬಿಕೆ,
ನೀನು ಹೊದಿಕೆಯೊಳಗೆ
ಗೊರಕೆ ಹೊಡೆಯುತ್ತಲಿದ್ದೆ!
*********
ವಿಷಾದದ ಬಣ್ಣಗಳಿಗದ್ದಿದ
ಕುಂಚ
ನನ್ನ ಹೃದಯವನ್ನು
ತೋಯಿಸಿಬಿಟ್ಟಿದೆ
ಹತ್ತಿರಬರಬೇಡ
ಕಲೆಯಾಗಿಬಿಟ್ಟೀತು
********
ನನ್ನ ಹೃದಯದ ಹಾಡು
ಕೇಳಲು ಚಂದಿರನಿದ್ದಾನೆ,
ನಕ್ಷತ್ರಗಳು ಸಾಲುಗಟ್ಟಿ ನಿಂತಿವೆ
ಇಬ್ಬನಿ ಕೊಡವಿಕೊಂಡು
ಹುಲ್ಲೂ ಕಿವಿ ನಿಮಿರಿಸಿದೆ
ನೀನು ಮಾತ್ರ
ಹೆಡ್ಫೋನಲ್ಲಿ ತಲೆಹುದುಗಿಸಿರುವೆ!
******
ಕನಸಲೋಕದಿಂದ
ಚಿಟ್ಟೆಯೊಂದು
ಹುರುಪಿನಿಂದ
ಹಾರಿಬಂತು
ಹೂತೋಟದಲ್ಲೂ
ಕಾಣದ ಹೂವಿಗಾಗಿ ಪರಿತಪಿಸಿತು!
11 comments:
ನಿಮ್ಮ ಕವನಗಳ ಪುಟ್ಟ ಪುಟ್ಟ ಸಾಲುಗಳನ್ನು ಓದುವಾಗ ಮನಸ್ಸು ಖುಷಿಗೊಳ್ಳುತ್ತೆ!
-ಚಿತ್ರಾ
ನಿಮ್ಮ ಕವನಗಳ ಬಗ್ಗೆ ನಿಜಕ್ಕೂ ತುಂಬ ಮೆಚ್ಚುಗೆಯಿದೆ.
ಚಿಟ್ಟೆ ಆದಷ್ಟು ಬೇಗ ಹೂವು ಕಾಣಸಿಗಲಿ,
ಉಲ್ಲಾಸದ ಕವನದ ಸಾಲುಗಳು
ಶೀಘ್ರ ಹೊರಹೊಮ್ಮಲಿ..
ವೇಣು ಅವ್ರೆ,
ಕವನ ಚಿಕ್ಕದಾಗಿ ಚೊಕ್ಕವಾಗಿವೆ ! ಜೊತೆಗೆ ಕೊನೆಯಲ್ಲಿನ "ಪಂಚ್" ಸೂಪರ್....
ಸುಂದರವಾದ (ಆದರೆ ಚುಚ್ಚುವ) ಹನಿಗವನಗಳು!
ಒ೦ಥರಾ ಚೆನ್ನಾಗಿರುವ ಹನಿಕವನಗಳು!
ಅಯ್ಯೋ!:) ಚೆನ್ನಾಗಿವೆ...
REALY GOOD.. !! THANK YOU..
ಚಿತ್ರ,
ಮನಸು ಖುಷಿಯಾಗುತ್ತಲೇ ಇರಲಿ :)
ಮಿಥುನ,
ಥ್ಯಾಂಕ್ಸ್ ಮಾರಾಯ
ಮಾಂಬಾಡಿ ಮಾಮ,
ವಿಷಾದಗೀತೆಯಲ್ಲಿ ಮನಸು ಮುಳುಗಿದ ಬಳಿಕ ಕೊನೆಗೊಮ್ಮೆ ಉಲ್ಲಾಸದ ಸಾಲುಗಳೂ ಬರಲೇ ಬೇಕಲ್ವೇ
ಶಿವು, ಸುನಾಥ್ ಸರ್,
ಸದಾ ಬಂದು ಓದಿ ಪ್ರೋತ್ಸಾಹಿಸುತ್ತಿರುವ ನಿಮಗೆ ವಂದನೆ
ಸುಧೇಶ್,
:) ಯಾಕೆ ಒಂಥರಾ ಆಯ್ತು
ಶ್ರೀಮಾತಾ
ಅಯ್ಯಯ್ಯೋ :)
ಸಿಮೆಂಟು ಮರಳು ಪ್ರಕಾಶ್,
:) ನನ್ನ ಬ್ಲಾಗ್ಗೆ ಸ್ವಾಗತ, ಮೆಚ್ಚಿಕೊಂಡದ್ದಕ್ಕೆ ಧನ್ಯವಾದ
ನಿಮ್ಮ ಬರಹಗಳು ಇಂಟರೆಸ್ಟಿಂಗ್ ಆಗಿದೆ. ಇನ್ನೊಮ್ಮೆ ನಿಧಾನವಾಗಿ ಎಲ್ಲಾ ಓದಬೇಕೆಂದು ಕಾಣುತ್ತದೆ.ನೀವು, ವಸಂತಕುಮಾರ ಪೆರ್ಲರ ಅಳಿಯ ಅಲ್ವೆ?
ಜಯದೇವ ಪ್ರಸಾದ
ಉಡುಪಿ
jayadev.prasad@Gmail.com
:)
Post a Comment