26.6.11

ಮಸಣದ ಗಾಳಿ

ಚಿತೆಯಲ್ಲಿ ಇನ್ನೂ ಆರದ
ಇಂಗಳದ ಧಗೆ..
ಅದರ ನಡುವೆ
ಕರಕಲಾದ ತಮ್ಮ
ದೇಹ ನೋಡಿದ
ಆತ್ಮಗಳ ಚೀರಾಟದಂತೆ
ಕೇಳಿ ಬರುತ್ತದೆ
ಮಸಣದ  ಮೂಲೆಯಿಂದ
ಗೂಬೆಯ ಧ್ವನಿ..

ಅದು ಕೇವಲ ಮಸಣವಲ್ಲ
ಆತ್ಮನಿವೇದನೆಯ ಬಿತ್ತರಿಗೆ.
ಒಂದೊಂದು ಆತ್ಮದ ಹಿಂದೆ
ಅದರದ್ದೇ ಆದ ಕಥೆ

ಕ್ಯಾನ್ಸರಾಗಿ ಸತ್ತ ರೋಗಿ,
ಸಕ್ಕರೆ ಕಾಯಿಲೆಯಿಂದ ಇನ್ನಿಲ್ಲವಾದ
ಭೋಗಿ.
ವರದಕ್ಷಿಣೆ ಬೆಂಕಿಯಲ್ಲಿ
ಸುಟ್ಟವಳು,
ಕೋಮುದಳ್ಳುರಿಯಲ್ಲಿ
ಕಣ್ಮುಚ್ಚಿದವನು..

ಒಂದೋ ಎರಡೋ...
ನೂರೆಂಟು ಆತ್ಮಗಳು
ಮತ್ತು
ಅಷ್ಟೇ ಕಾರಣಗಳು

ಯಾರಿಗೂ ಕೇಳಿಸದಂತೆ
ಅನುರಣಿಸುತ್ತದೆ
ವೇದನೆಯ ಚೀತ್ಕಾರ
ಬೀಸುತ್ತದೆ ಗಾಳಿ
ರೊಯ್ಯನೆ ಬಿದ್ದ ಎಲೆಗಳನೆತ್ತಿ
ಒಗೆಯುತ್ತದೆ
ಅಮಾವಾಸ್ಯೆ ರಾತ್ರಿಯ
ನೋವಿಗೆ, ಕಿವಿಯಾಗುತ್ತದೆ
ಸ್ಮಶಾನದ ಬಿಕ್ಕಳಿಕೆಯನ್ನು
ಸಂತೈಸುತ್ತದೆ..

photo courtesy Peter Bowers

2 comments:

ಭಾಶೇ said...

Awesome

ರಾಜ್ said...

ಇದ್ಯಾಕೆ ಮಸಣದ ಹಾದಿಯಲ್ಲಿ ಹೋಗಿದ್ದಿರಿ ಗೆಳೆಯರೇ., ಇಷ್ಟೊಂದು ಜೀವನ್ಮುಖಿ ರಸ್ತೆಗಳಿರುವಾಗ... ಆದರೂ ಮಸಣದ ಹಾದಿಯನ್ನೇ ಅದ್ಬುತವಾಗಿ ವರ್ಣಿಸಿದ್ದೀರಿ. ಸೊಗಸಾಗಿದೆ ಕವನ..
ಆಗಾಗ ನಮ್ಮ ಬ್ಲಾಗಿಗೂ ಬೇಟಿ ಕೊಡಿ..

Related Posts Plugin for WordPress, Blogger...