7.4.13

ವೈಶಾಖದ ನಿಟ್ಟುಸಿರು

ಬಯಲುಬೆಟ್ಟದ ಹಾದಿಯಲ್ಲಿ
ಬೀಸುವ ಗಾಳಿಯೂ
ಬಿಸಿಯಾಗಿದೆ, ಬಹುಷಃ
ನಾನಿಲ್ಲದೆ ನಿನ್ನ ನೋವು
ಇನ್ನೂ ಹಸಿಯಾಗಿದೆ
.......

ನಗರದ ರಾತ್ರಿಗಳು
ಜಗಮಗಿಸುತ್ತವೆ ದೀಪಗಳು
ಕೋರೈಸುತ್ತವೆ ನಾಳೆಯೇ
ಇಲ್ಲವೇನೋ ಎಂಬಂತೆ!
ಚಂದಿರನಿಗೂ ತನ್ನ ಮೇಲೆ
ಕೀಳರಿಮೆ ಬರುವಂತೆ!
.......

ಒಣಗಿ ಹೋದ ನದಿ
ದಂಡೆಯಲ್ಲಿ ಕುಳಿತ
ಒಂಟಿ ಕಪ್ಪೆ ಉದಾಸೀನದಲ್ಲಿ
ಮಳೆಗಾಲದ ಪ್ರವಾಹ ನೆನೆದು
ವಟಗುಟ್ಟುತ್ತಿದ್ದರೆ
ಮಣ್ಣಿನ ಅಡಿಯಲ್ಲಿರುವ
ನೀರಿನ ಪಸೆ ಅಸಹಾಯಕವಾಗಿ
ಅಳುತ್ತಿದೆ!
..........

ಒಂದು ಭಯಂಕರ
ಬೇಸಿಗೆ ರಾತ್ರಿ
ಕನಸಿನಲ್ಲೂ ನೀನು
ನನ್ನ ಹತ್ತಿರ ಬರಲು
ಬೆದರಿಬಿಟ್ಟೆ..


(ಒಂದು ಉದಾಸೀನದ ಭಾನುವಾರ ತಲೆಯಲ್ಲಿ ಹುಟ್ಟಿಕೊಂಡ ಪಲುಕುಗಳು)
ಚಿತ್ರ: ಅಂತರ್ಜಾಲದಿಂದ

7 comments:

ಶ್ರೀನಿಧಿ.ಡಿ.ಎಸ್ said...

:) nice han!

sunaath said...

ಉತ್ತಮ ಕಲ್ಪನೆ!

VENU VINOD said...

ಮೆಚ್ಚಿಕೊಂಡ ಮಿತ್ರರಿಗೆಲ್ಲ ವಂದನೆಗಳು...
ಬನ್ನಿ, ಓದಿ ಪ್ರೋತ್ಸಾಹಿಸಿ....
*ವೇಣು

ರಾಘವೇಂದ್ರ ಹೆಗಡೆ said...

ಚಂದ್ರನಿಗೆ ಕೀಳರಿಮೆ ಬರುವಂತ ಬೆಳಕು, ಮಣ್ಣಿನ ಅಡಿ ಅಸಹಾಯಕವಾಗಿ ಅಳುವ ನೀರಿನ ಪಸೆ... ಅಬ್ಬ ಅದ್ಭುತ ಕಲ್ಪನೆ. . ತಮ್ಮ ಈ ಪಲಕುಗಳು ತುಂಬಾ ಆಪ್ತವೆನಿಸುತ್ತವೆ... :)

Shruthi P.K said...

Good one sir.......very cute poem. Just loved it....

VENU VINOD said...

ಥ್ಯಾಂಕ್ಯು ರಾಘವೇಂದ್ರ, ಶ್ರುತಿ ಪಿ.ಕೆ...

ಯುವ ಸಾರಥ್ಯ said...

Nice

Related Posts Plugin for WordPress, Blogger...