ಕಲಾವಿದನ ಕುಂಚದಲ್ಲಿ
ಅರಳಿದ್ದ ಆ ಸುಂದರ
ಭೂದೃಶ್ಯವೆಲ್ಲ ಎಲ್ಲಿ
ತೊಳೆದು ಹೋಯಿತು?
ಗಾಢವಾಗಿದ್ದ ಆ
ಹಸಿರುಮರಗಳ ಸಾಲು
ನಸುನೀಲ ಬಣ್ಣದ
ಬೆಟ್ಟದ ತೆಕ್ಕೆಯಲ್ಲಿದ್ದ
ಗುಡಿಸಲು
ಎಲ್ಲಿ ಗುಡಿಸಿ ಹೋಯಿತು?
ಕಲಾವಿದನಿಗೇ ಅಚ್ಚರಿ
ಈಗೀಗ ಕುಂಚದಲ್ಲಿ
ಕೆಲವು ವರ್ಣಗಳು ಅರಳುವುದಿಲ್ಲ
ಎಲ್ಲೇ ನೋಡಿದರೂ ಬರಿಯ ಕೆಂಪು,
ಕ್ಯಾನ್ವಾಸಿನಿಂದ ರಕ್ತ ಚೆಲ್ಲಿ
ನದಿಯುದ್ದಕ್ಕೂ ಹರಡಿಕೊಂಡ ಹಾಗೆ
ಜೀವಂತಿಕೆಯ ಬಣ್ಣಗಳನ್ನೆಲ್ಲಾ
ನುಂಗಿದ ಹಾಗೆ
ಅದಕ್ಕಾಗಿ ಕಲಾವಿದ
ಕುಂಚ ಕೆಳಗಿಟ್ಟಿದ್ದಾನೆ
ಬಣ್ಣಗಳು ಬಣ್ಣಕಳೆದುಕೊಂಡಿವೆ
5 comments:
"ಬಣ್ಣಗಳು ಬಣ್ಣಕಳೆದುಕೊಂಡಿವೆ" ಆಹಾ! ಎಂಥಾ ಸಾಲು!
ಕ್ಯಾನ್ವಾಸ್ ಬಣ್ಣ, ಕವನ ಸೂಪರ್....
ಬಹಳ ದಿನ ಆಯ್ತು ಏನೂ ಹಾಕಿಲ್ಲ! ಶೂಟೌಟ್ ಬ್ಯುಸೀನಾ?
ಸುಶ್ರುತ, ಪ್ರವೀಣ್
ಮೆಚ್ಚಿಕೊಂಡದ್ದಕ್ಕೆ ಥ್ಯಾಂಕ್ಸ್. ಚಿತ್ರ ನನ್ನದಲ್ಲ. ಇಂಟರ್ನೆಟ್ನಲ್ಲಿ ನೋಡುವಾಗ ಸಿಕ್ಕಿದ್ದು. ಯಾರದೆಂದು ಗೊತ್ತಿಲ್ಲ!
ವಿನಾಯಕ, ನಮ್ಮ ಕಥೆ ನಿಮಗೆ ಗೊತ್ತಲ್ವೇ. ಸಮಯ ಇದ್ದಾಗ ಮೂಡ್ ಇಲ್ಲ. ಮೂಡ್ ಇದ್ರೆ ಸಮಯ ಇಲ್ಲ:)
ವಿನೋದ್,
ಕವಿತೆ ತುಂಬ ಚೆನ್ನಾಗಿದೆ.
ಬಣ್ಣಗಳು ಬಣ್ಣ ಕಳೆದುಕೊಂಡಿವೆ - ತುಂಬ ಸತ್ಯ.
ಕೆಂಪು ರಾಚುತ್ತಿದೆಯಷ್ಟೇ ಅಲ್ಲ, ಮಸಿಯೂ ಕವಿದುಕೊಂಡಿದೆ.. :(
ನಾವು ಹಾಳಾಗಿದ್ದಲ್ಲದೆ, ನಮ್ಮ ನೆಲವನ್ನೂ ಮಕಾಡೆ ಮಲಗಿಸಿದ್ದೇವೆ.. :(
Post a Comment